ಕೋಲ್ಕತ್ತಾ:ಭಾರತದಲ್ಲಿ ಕೊನೆಗೂ ಅಹರ್ನಿಶಿ(ಹೊನಲು-ಬೆಳಕು) ಟೆಸ್ಟ್ ಪಂದ್ಯಕ್ಕೆ ಸಿದ್ಧತೆಯಾಗುತ್ತಿದ್ದು, ಬಿಸಿಸಿಐ ಅಧ್ಯಕ್ಷ ಹುದ್ದೆಯೇರಿದ ಒಂದೇ ವಾರದಲ್ಲಿ ಸೌರವ್ ಗಂಗೂಲಿ ಮ್ಯಾಜಿಕ್ ಮಾಡಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೇರಿದ ಬಳಿಕ ಅಹರ್ನಿಶಿ ಟೆಸ್ಟ್ ಪಂದ್ಯ ಆಯೋಜನೆಗೆ ಬಗ್ಗೆ ಪ್ರಸ್ತಾಪ ಮಾಡುತ್ತಲೇ ಬಂದಿದ್ದರು. ಅ.25ರಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐ ನೂತನ ಅಧ್ಯಕ್ಷರನ್ನು ಭೇಟಿಯಾಗಿದ್ದರು. ಈ ವೇಳೆ ಒಂದು ಗಂಟೆಗಳ ಕಾಲ ಇವರಿಬ್ಬರೂ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಅಧ್ಯಕ್ಷನಾದ ಒಂದೇ ವಾರದಲ್ಲಿ ದಾದಾ ಮ್ಯಾಜಿಕ್... ಹಗಲು ರಾತ್ರಿ ಟೆಸ್ಟ್ಗೆ ಜೈ ಅಂದ ಬಿಸಿಬಿ
ಆದರೆ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಜಸ್ಟ್ ಮೂರೇ ಮೂರು ಸೆಕೆಂಡ್ನಲ್ಲಿ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಸ್ವತಃ ಗಂಗೂಲಿ ಹೇಳಿಕೊಂಡಿದ್ದಾರೆ.
"ಅ.25ರಂದು ನಾವಿಬ್ಬರೂ ಕ್ರಿಕೆಟ್ಗೆ ಸಂಬಂಧಿಸಿದಂತೆ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ದೆವು. ಈ ವೇಳೆ ನಾನು ಅಹರ್ನಿಶಿ ಟೆಸ್ಟ್ ಆಯೋಜಿಸಬೇಕು ಎಂದು ಕೊಹ್ಲಿ ಮುಂದೆ ಪ್ರಸ್ತಾಪಿಸಿದೆ. ನನ್ನ ಮಾತು ಮುಗಿದ ಮೂರೇ ಸೆಕೆಂಡ್ನಲ್ಲಿ ಕೊಹ್ಲಿ ಖಂಡಿತಾ ಆಯೋಜನೆ ಮಾಡೋಣ ಎಂದು ಕೊಹ್ಲಿ ಉತ್ಸಾಹಭರಿತರಾಗಿ ಹೇಳಿದರು" ಎಂದು ದಾದಾ ಹೇಳಿದ್ದಾರೆ.
ಮಾಜಿ ಅಂಪೈರ್ ಸೈಮನ್ ಟೌಫೆಲ್ ಬರೆದಿರುವ ಫೈಂಡಿಂಗ್ ದಿ ಗ್ಯಾಪ್ಸ್(Finding The Gaps) ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸೌರವ್ ಗಂಗೂಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನವೆಂಬರ್ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತ ಹಾಗೂ ಪ್ರವಾಸಿ ಬಾಂಗ್ಲಾದೇಶ ತಂಡಗಳು ಚೊಚ್ಚಲ ಅಹರ್ನಿಶಿ ಟೆಸ್ಟ್ ಪಂದ್ಯವನ್ನಾಡಲಿದೆ.