ಕರ್ನಾಟಕ

karnataka

ETV Bharat / sports

3ನೇ ಟೆಸ್ಟ್ ಪಂದ್ಯ ನೋಡಲು ಪ್ರೇಕ್ಷಕರ ನಿರಾಸಕ್ತಿ..! ಕಾರಣ ಧೋನಿನಾ? - ರಾಂಚಿ ಪಂದ್ಯಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ

200ರಿಂದ 2000 ತನಕ ಟಿಕೆಟ್ ಬೆಲೆ ನಿಗದಿಪಡಿಸಲಾಗಿದ್ದು, ಟೀಂ ಇಂಡಿಯಾ ಈಗಾಗಲೇ ಸರಣಿ ಗೆದ್ದಿರುವ ಕಾರಣದಿಂದ ಪ್ರೇಕ್ಷಕರು ಮೈದಾನದತ್ತ ಆಗಮಿಸುವ ಮನಸ್ಸು ಮಾಡಿಲ್ಲ. ಲೋಕಲ್ ಬಾಯ್ ಧೋನಿ ಟೆಸ್ಟ್​​ನಲ್ಲಿ ಇಲ್ಲದಿರುವುದೂ ಎಲ್ಲಕ್ಕಿಂತ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಮೂರನೇ ಟೆಸ್ಟ್ ಪಂದ್ಯ ನೋಡಲು ಪ್ರೇಕ್ಷಕರ ನಿರಾಸಕ್ತಿ

By

Published : Oct 18, 2019, 11:15 AM IST

ರಾಂಚಿ:ಟೀಂ ಇಂಡಿಯಾ ಹಿರಿಯ ಆಟಗಾರ ಎಂ ಎಸ್ ಧೋನಿ ತವರು ಮೈದಾನದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಂಚಿ ಮೈದಾನದ ಇತಿಹಾಸದ ಎರಡನೇ ಟೆಸ್ಟ್ ಪಂದ್ಯ ನಾಳೆಯಿಂದ ಆರಂಭವಾಗಲಿದ್ದು, 39,000 ಆಸನದ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿ ಕೇವಲ 1500 ಟಿಕೆಟ್​ಗಳು ಮಾತ್ರವೇ ಮಾರಾಟಗೊಂಡಿದೆ ಎಂದು ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿದೆ.

ರಾಂಚಿ ಮೈದಾನ

200ರಿಂದ 2000 ತನಕ ಟಿಕೆಟ್ ಬೆಲೆ ನಿಗದಿಪಡಿಸಲಾಗಿದ್ದು, ಟೀಂ ಇಂಡಿಯಾ ಈಗಾಗಲೇ ಸರಣಿ ಗೆದ್ದಿರುವ ಕಾರಣದಿಂದ ಪ್ರೇಕ್ಷಕರು ಮೈದಾನದತ್ತ ಆಗಮಿಸುವ ಮನಸ್ಸು ಮಾಡಿಲ್ಲ. ಲೋಕಲ್ ಬಾಯ್ ಧೋನಿ ಟೆಸ್ಟ್​​ನಲ್ಲಿ ಇಲ್ಲದಿರುವುದೂ ಎಲ್ಲಕ್ಕಿಂತ ಮುಖ್ಯ ಕಾರಣ ಎನ್ನಲಾಗುತ್ತಿದೆ.

2017ರ ಮಾರ್ಚ್​ನಲ್ಲಿ ರಾಂಚಿ ಮೈದಾನದಲ್ಲಿ ಮೊದಲ ಟೆಸ್ಟ್ ಆಯೋಜನೆಯಾಗಿತ್ತು. ಆದರೆ, ಆ ವೇಳೆಗಾಗಲೇ ಮಾಹಿ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು.ಈಗಾಗಲೇ ಸರಣಿ ಗೆದ್ದಿರುವ ಟೀಂ ಇಂಡಿಯಾ ನಾಳೆಯಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿಯನ್ನು ಕ್ಲೀನ್​ಸ್ವೀಪ್ ಮಾಡಲು ಯೋಜನೆ ರೂಪಿಸಿದೆ.

ABOUT THE AUTHOR

...view details