ಹೈದರಾಬಾದ್: ಟೀಂ ಇಂಡಿಯಾ ಆರಂಭಿಕ ಸ್ಫೋಟಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ನನ್ನ ನೆಚ್ಚಿನ ಬ್ಯಾಟ್ಸ್ಮನ್ ಎಂದು ದಕ್ಷಿಣ ಆಫ್ರಿಕಾ ಆಲ್ರೌಂಡರ್ ಜೆಪಿ ಡುಮಿನಿ ಹೇಳಿದ್ದಾರೆ.
ಜಿಂಬಾಬ್ವೆ ಮಾಜಿ ವೇಗದ ಬೌಲರ್ ಪೊಮ್ಮಿ ಎಂಬಂಗ್ವಾ ಜತೆ ಇನ್ಸ್ಟಾಗ್ರಾಂ ಲೈವ್ ವೇಳೆ ಈ ಮಾಹಿತಿ ಹಂಚಿಕೊಂಡಿರುವ ಅವರು, ರೋಹಿತ್ ಶರ್ಮಾ ನನ್ನ ನೆಚ್ಚಿನ ಬ್ಯಾಟ್ಸ್ಮನ್. ಅವರ ಪಿಕ್-ಅಪ್ ಫುಲ್ ಶಾಟ್ ನನಗೆ ಇಷ್ಟವಾಗುತ್ತದೆ ಎಂದಿದ್ದಾರೆ.
2019ರಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಕೇವಲ 9 ಪಂದ್ಯಗಳಿಂದ 81.00 ಸರಾಸರಿಯಲ್ಲಿ 648 ರನ್ ಗಳಿಸಿದ್ದ ರೋಹಿತ್ ಐದು ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ಸದ್ಯ ಏಕದಿನ ಕ್ರಿಕೆಟ್ನಲ್ಲಿ ತಂಡದ ಉಪ ನಾಯಕನಾಗಿರುವ ರೋಹಿತ್ ಶರ್ಮಾ, 224 ಏಕದಿನ ಪಂದ್ಯ, 108 ಟಿ-20 ಹಾಗೂ 32 ಟೆಸ್ಟ್ ಪಂದ್ಯಗಳನ್ನಾಡಿದ್ದು, ಎಲ್ಲಾ ಮಾದರಿಗಳಿಂದ 14,029 ರನ್ಗಳಿಸಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಮೂರು ದ್ವಿಶತಕ ದಾಖಲು ಮಾಡಿರುವ ಏಕೈಕ ಬ್ಯಾಟ್ಸ್ಮನ್ ಆಗಿರುವ ರೋಹಿತ್ ಶರ್ಮಾ, ಇದೇ ಮಾದರಿ ಕ್ರಿಕೆಟ್ನಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್ನಲ್ಲಿ ನಡೆದ ಪಂದ್ಯದಲ್ಲಿ 264 ವೈಯಕ್ತಿಕ ರನ್ ಗಳಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನ ಮುನ್ನಡೆಸುತ್ತಿದ್ದಾರೆ. ಜೆಪಿ ಡುಮಿನಿ ಕೂಡ ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು.