ಸೌತಾಂಪ್ಟನ್ :ಮೊದಲೆರಡು ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದ ಇಂಗ್ಲೆಂಡ್ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಇಸಿಬಿ ಖಚಿತಪಡಿಸಿದೆ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಿಂದ ಜೋಸ್ ಬಟ್ಲರ್ ಔಟ್
ಬಟ್ಲರ್ ಎರಡನೇ ಟಿ20 ಪಂದ್ಯದಲ್ಲಿ 54 ಎಸೆತಗಳಲ್ಲಿ 77 ರನ್ಗಳಿಸಿ ಸರಣಿ ಗೆಲ್ಲಲು ನೆರವಾಗಿದ್ದರು. ಮೊದಲ ಪಂದ್ಯದಲ್ಲಿಯೂ 44 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು..
ಇಂಗ್ಲೆಂಡ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದ ನಂತರ ವೈಯಕ್ತಿಕ ಕಾರಣದಿಂದ ಬಯೋ ಸೆಕ್ಯೂರ್ ವಲಯದಿಂದ ಅವರ ಕುಟುಂಬದ ಜೊತೆ ಹೊರ ಹೋಗಿದ್ದಾರೆ. ಆದ್ದರಿಂದ 3ನೇ ಟಿ20 ಪಂದ್ಯಕ್ಕೆ ಅವರು ಅಲಭ್ಯರಾಗಲಿದ್ದಾರೆ. ಮತ್ತೆ ಏಕದಿನ ಸರಣಿಯ ವೇಳೆಗೆ ಬಯೋ ಸೆಕ್ಯೂರ್ ವಲಯಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಪ್ರಕಟಣೆ ಹೊರಡಿಸಿದೆ.
ಬಟ್ಲರ್ ಎರಡನೇ ಟಿ20 ಪಂದ್ಯದಲ್ಲಿ 54 ಎಸೆತಗಳಲ್ಲಿ 77 ರನ್ಗಳಿಸಿ ಸರಣಿ ಗೆಲ್ಲಲು ನೆರವಾಗಿದ್ದರು. ಮೊದಲ ಪಂದ್ಯದಲ್ಲಿಯೂ 44 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬಟ್ಲರ್ 3ನೇ ಪಂದ್ಯದಿಂದ ಹೊರ ಹೋಗುತ್ತಿರುವುದರಿಂದ ಯುವ ಬ್ಯಾಟ್ಸ್ಮನ್ ಟಾಮ್ ಬ್ಯಾಂಟನ್ ಅವರು ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಭಾನುವಾರದ ಪಂದ್ಯದಲ್ಲಿ ಬೆರಳಿನ ಗಾಯಕ್ಕೆ ತುತ್ತಾಗಿರುವ ಇಯಾನ್ ಮಾರ್ಗನ್ ಆಡಲಿದ್ದಾರೆ ಎಂಬುದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.