ಪುಣೆ: ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಭಾರತದೆದುರಿನ ಮುಂದಿನ 2 ಏಕದಿನ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಹಾಗಾಗಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ತಂಡದ ನಾಯಕನಾಗಿ ನೇಮಕ ಗೊಂಡಿದ್ದಾರೆ.
ಮಂಗಳವಾರ ನಡೆದಿದ್ದ ಮೊದಲ ಪಂದ್ಯದ ವೇಳೆ ಮಾರ್ಗನ್ ಫೀಲ್ಡಿಂಗ್ ಮಾಡುವ ವೇಳೆ ಚೆಂಡು ಹೆಬ್ಬೆರಳು ಮತ್ತು ತೋರುಬೆರಳಿನ ನಡುವೆ ಬಡಿದ ಪರಿಣಾಮ ಸೀಳಿಕೊಂಡಿದ್ದು, ಈ ಗಾಯಕ್ಕೆ ನಾಲ್ಕು ಹೊಲಿಗೆಗಳು ಹಾಕಲಾಗಿದೆ. ಗುರುವಾರ ಎಂಸಿಎ ಕ್ರೀಡಾಂಗಣದಲ್ಲಿ ತರಬೇತಿಯ ಸಮಯದಲ್ಲಿ ಫೀಲ್ಡಿಂಗ್ ಮಾಡಲು ಪ್ರಯತ್ನಿಸಿದ ಮಾರ್ಗನ್ ನಂತರ ತಾವು ಮುಂದಿನ ಪಂದ್ಯಗಳಲ್ಲಿ ಆಡುವುದಕ್ಕೆ ಅನ್ಫಿಟ್ ಎಂದು ಹೇಳಿಕೊಂಡಿದ್ದಾರೆ.