ಪುಣೆ :ಭಾರತದ ವಿರುದ್ಧ 2-1ರಲ್ಲಿ ಏಕದಿನ ಸರಣಿ ಸೋಲು ಕಂಡ ನಂತರ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ತಂಡದ ಹಂಗಾಮಿ ನಾಯಕ ಜೋಸ್ ಬಟ್ಲರ್ ಈ ಸರಣಿ ಸೋಲಿನ ನಂತರವೂ ನಮ್ಮ ತಂಡ ಅತ್ಯುತ್ತಮ ತಂಡವಾಗಿಯೇ ಉಳಿಯಲಿದೆ. ಯಾಕೆಂದರೆ, ಕಳೆದ 11 ಸರಣಿಗಳಲ್ಲಿ ನಾವು ಸೋತಿರುವುದು ಕೇವಲ 2ರಲ್ಲಿ ಮಾತ್ರ ಎಂದು ತಿಳಿಸಿದ್ದಾರೆ.
2019ರಲ್ಲಿ 50 ಓವರ್ಗಳ ವಿಶ್ವಕಪ್ ಜಯಿಸಿದ ಮೂರುವರೆ ವರ್ಷಗಳ ನಂತರ ಸತತ 9 ಸರಣಿ ಗೆದ್ದಿದ್ದ ಇಂಗ್ಲೆಂಡ್ ಕಳೆದ ಎರಡು ಪ್ರಯತ್ನಗಳಲ್ಲಿ ಹಿನ್ನಡೆ ಅನುಭವಿಸಿದೆ. ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 2-1ರಲ್ಲಿ ಸೋಲು ಕಂಡರೆ, ಇದೀಗ ಭಾರತದೆದುರು 2-1ರಲ್ಲಿ ಸರಣಿ ಕಳೆದುಕೊಂಡಿದೆ.
"ನಾವು ತುಂಬಾ ದೀರ್ಘ ಸಮಯಗಳಿಂದ ಉತ್ತಮ ತಂಡವಾಗಿದ್ದೆವು. ಈ ಸೋಲಿನ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ, ನಾವು ಕಳೆದ 11 ಸರಣಿಯಲ್ಲಿ 2ರಲ್ಲಿ ಮಾತ್ರ ಸೋಲು ಕಂಡಿದ್ದೇವೆ. ಆದರೆ, ನಮ್ಮ ತಂಡದ ಪ್ರತಿಭೆಗಳನ್ನು ನಾವು ವಿಸ್ತಾರ ಮಾಡುತ್ತಿದ್ದೇವೆ. ನಮ್ಮಲ್ಲಿ ಅದ್ಭುತ ಆಟಗಾರರಿದ್ದಾರೆ. ಮುಂಬರುವ ದಿನಗಳಲ್ಲಿ ಅವರಿಗೆ ಅವಕಾಶಗಳು ದೊರೆಯಲಿದೆ. ಈಗಲೂ ನಮ್ಮದು ಅತ್ಯುತ್ತಮ ತಂಡವಾಗಿದೆ"ಎಂದು ಬಟ್ಲರ್ ಹೇಳಿದ್ದಾರೆ.
ಇದು 2023ರ ವಿಶ್ವಕಪ್ಗಾಗಿ ನಾವು ಎದುರು ನೋಡುತ್ತಿರುವ ದೀರ್ಘವಾದಿಯ ಯೋಜನೆಯಾಗಿದೆ. ಆದರೆ, ನಾವು ಯುವ ಸಾಮರ್ಥ್ಯಕ್ಕೆ ಮಿತಿಗಳನ್ನು ಹಾಕಲು ನಾವು ಎಂದಿಗೂ ಬಯಸುವುದಿಲ್ಲ. ನಾವು ಇಲ್ಲಿ ಪಂದ್ಯವನ್ನು ಗೆಲ್ಲಲು ಹಾಗೂ ಸರಣಿಯನ್ನು ಗೆಲ್ಲಲೆಂದೇ ಆಡಿದ್ದೇವೆ. ಆದರೆ, ಟಿ20 ಅಥವಾ ಏಕದಿನ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಪಂದ್ಯಗಳಲ್ಲಿ ಅದನ್ನು ನಮೆಗೆ ಅಂತಿಮವಾಗಿ ಸಾಧಿಸಲು ಸಾಧ್ಯವಾಗಲಿಲ್ಲ. ಆ ಕಾರಣದಿಂದಾಗಿ ಖಂಡಿತಾ ನನಗೆ ಆ ಬಗ್ಗೆ ಬೇಸರವಿದೆ" ಎಂದಿದ್ದಾರೆ.
ಇದನ್ನು ಓದಿ :ಭುವಿಯನ್ನು ಮ್ಯಾನ್ ಆಫ್ ಸಿರೀಸ್ ಪ್ರಶಸ್ತಿಗಾಗಿ ಹೆಸರಿಸದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ಮೈಕಲ್ ವಾನ್