ಮ್ಯಾಂಚೆಸ್ಟರ್:ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿ ಸೋಲಿನತ್ತ ಸಾಗುತ್ತಿದ್ದ ಪಂದ್ಯವನ್ನು ಇಂಗ್ಲೆಂಡ್ ಕಡೆಗೆ ತಿರುಗಿಸಿದ್ದರು.
ಆದರೆ, ಅವರು ಮೈದಾನದಲ್ಲಿ ಇಂಗ್ಲೆಂಡ್ ತಂಡಕ್ಕಾಗಿ ಮೈದಾನದಲ್ಲಿ ಆಡುತ್ತಿದ್ದರೆ, ಅತ್ತ ಆಸ್ಪತ್ರೆಯಲ್ಲಿ ಅವರ ತಂದೆ ಜಾನ್ ಬಟ್ಲರ್ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಿಳಿದು ಬಂದಿದೆ. (ಅವರು ಕಳೆದ ರಾತ್ರಿ ಡಿಸ್ಚಾರ್ಜ್ ಆಗಿದ್ದಾರೆ.)
ಈ ವಿಚಾರವನ್ನು ಬಟ್ಲರ್ ಅವರ ಸಹೋದರಿ ಬಹಿರಂಗ ಪಡಿಸಿದ್ದರು. ತಂದೆ ಆಸ್ಪತ್ರೆಯಲ್ಲಿದ್ದಾಗ ಪಂದ್ಯದ 3 ದಿನಗಳು ಬಾಕಿ ಉಳಿದಿದ್ದವು. ರಾತ್ರಿ 10 ಗಂಟೆಗೆ ತಂದೆ ಆಸ್ಪತ್ರೆಯಲ್ಲಿದ್ದಾರೆ ಎಂದು ಬಟ್ಲರ್ಗೆ ತಿಳಿಸಿದ್ದರು. ಆದರೂ ಬಟ್ಲರ್ ತಂಡಕ್ಕಾಗಿ ಹೋರಾಡಿ ಗೆಲುವು ತಂದುಕೊಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ನಾಯ ಜೋ ರೂಟ್, ತಂಡದಲ್ಲಿ ಅವಕಾಶ ಕಳೆದುಕೊಳ್ಳುವ ಭೀತಿ ಮತ್ತು ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒತ್ತಡವನ್ನು ಸಹಿಸಿಕೊಂಡು ಆಡಿದ್ದಕ್ಕೆ ಬಟ್ಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ." ಜೋಸ್ ಅವರು ಎಂತಹ ಒತ್ತಡವನ್ನಾದರೂ ಎದುರಿಸಲು ಸಮರ್ಥರಾಗಿದ್ದಾರೆ ಎಂದು ಅವರ ಆಟವೇ ತೋರಿಸಿದೆ" ಎಂದು ತಿಳಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ನನ್ನ ಪ್ರದರ್ಶನದ ಬಗ್ಗೆ ಆಲೋಚಿಸುತ್ತಾ ಅದೆಷ್ಟೋ ರಾತ್ರಿ ಕಳೆದಿದ್ದೇನೆ. ಪಾಕ್ ವಿರುದ್ಧದ ಟೆಸ್ಟ್ನಲ್ಲಿ ರನ್ಗಳಿಸದೇ ಹೋದರೆ ಅದೇ ನನ್ನ ಕೊನೆಯ ಟೆಸ್ಟ್ ಎಂದು ನನ್ನ ತಲೆಯಲ್ಲಿತ್ತು. ಕೀಪಿಂಗ್ ಕೂಡ ಸರಿಯಾಗಿ ಮಾಡದಿದ್ದರಿಂದ ಬ್ಯಾಟಿಂಗ್ನಲ್ಲಾದರೂ ಅಮೂಲ್ಯವಾದ ರನ್ಗಳಸಬೇಕೇಂದುಕೊಂಡಿದ್ದೆ. ಅದು ಸಾಧ್ಯವಾಗಿದ್ದಕ್ಕೆ ಆನಂದವಿದೆ ಎಂದು ಜೋಸ್ ಬಟ್ಲರ್ ಹೇಳಿದ್ದಾರೆ.
ಕೊನೆಯ ಎರಡು ದಿನ ಆಟ ಬಾಕಿಯುಳಿದಿದ್ದಾಗ ಪಾಕ್ 277 ರನ್ಗಳ ಸವಾಲಿನ ಗುರಿ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದೆ. ಇಂಗ್ಲೆಂಡ್ 117 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಒಂದಾದ ಬಟ್ಲರ್ (75) ಹಾಗೂ ವೋಕ್ಸ್(84) 139 ರನ್ಗಳ ಜೊತೆಯಾಟ ನಡೆಸಿ ಇಂಗ್ಲೆಂಡ್ಗೆ ಅಚ್ಚರಿಯ ಗೆಲುವು ತಂದು ಕೊಟ್ಟಿದ್ದರು.