ಕರ್ನಾಟಕ

karnataka

ETV Bharat / sports

ಕೊರೊನಾ ಹೋರಾಟಕ್ಕೆ ಕೈಜೋಡಿಸಿದ ಬಟ್ಲರ್​... ವಿಶ್ವಕಪ್​ ಫೈನಲ್​ನಲ್ಲಿ ತೊಟ್ಟ ಜರ್ಸಿ ಹರಾಜಿಗಿಟ್ಟ ಕ್ರಿಕೆಟರ್​​! - ಇಂಗ್ಲೆಂಡ್​ ಕ್ರಿಕೆಟರ್​

ವಿಶ್ವವೇ ಡೆಡ್ಲಿ ವೈರಸ್​ ಕೊರೊನಾ ವಿರುದ್ಧ ಹೋರಾಟ ನಡೆಸಿದೆ. ಇಂಗ್ಲೆಂಡ್​ನಲ್ಲೂ ಸಾವಿರಾರು ಜನರ ಬಲಿ ಪಡೆದುಕೊಂಡಿರುವ ಮಹಾಮಾರಿ ರುದ್ರನರ್ತನವಾಡುತ್ತಿದ್ದು, ಅದರ ವಿರುದ್ಧ ಹೋರಾಡಲು ಸಹಾಯ ಮಾಡುವಂತೆ ಸರ್ಕಾರ ಮನವಿ ಮಾಡಿಕೊಂಡಿದೆ.

Jos Buttler
Jos Buttler

By

Published : Apr 1, 2020, 11:54 AM IST

ಲಂಡನ್​: ಜಾಗತಿಕ ಮಟ್ಟದಲ್ಲಿ ರುದ್ರ ನರ್ತನವಾಡುತ್ತಿರುವ ಮಹಾಮಾರಿ ಕೊರೊನಾ ಪ್ರಪಂಚದ ಬಹುತೇಕ ಎಲ್ಲ ದೇಶಗಳಲ್ಲೂ ಹರಡಿದೆ. ಇದರಿಂದ ಹೊರಬರಲು ಅಲ್ಲಿನ ಸರ್ಕಾರ ಇನ್ನಿಲ್ಲದ ಸರ್ಕಸ್​ ನಡೆಸುತ್ತಿವೆ. ಇಂಗ್ಲೆಂಡ್​​ನಲ್ಲೂ ರಣಕೇಕೆ ಹಾಕುತ್ತಿರುವ ಈ ಡೆಡ್ಲಿ ವೈರಸ್​ನಿಂದ ಹೊರಬರಲು ಅಲ್ಲಿನ ಸರ್ಕಾರ ಜನಸಾಮಾನ್ಯರ ಬಳಿ ಸಹಾಯಕ್ಕಾಗಿ ಮನವಿ ಮಾಡಿದೆ.

ಇಂಗ್ಲೆಂಡ್​ನಲ್ಲೂ ಮಹಾಮಾರಿ ಕೊರೊನಾ ವೈರಸ್​ ಈಗಾಗಲೇ 1,789 ಜನರ ಪ್ರಾಣ ಬಲಿ ಪಡೆದುಕೊಂಡಿದ್ದು, ಲಕ್ಷಾಂತರ ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ರಕ್ಕಸ ಮಹಾಮಾರಿಯಿಂದ ಹೊರಬರಲು ಅಲ್ಲಿನ ಸರ್ಕಾರ ಜನರ ಬಳಿ ಮನವಿ ಮಾಡಿಕೊಂಡಿದ್ದು, ತಮ್ಮ ಕೈಯಿಂದ ಆದಷ್ಟು ಸಹಾಯ ಮಾಡುವಂತೆ ಕೇಳಿಕೊಂಡಿದೆ.

ಇಂಗ್ಲೆಂಡ್ ಸರ್ಕಾರದ ಮನವಿಗೆ ಸ್ಪಂದಿಸಿರುವ ಕ್ರಿಕೆಟರ್​ ಜಾಸ್​ ಬಟ್ಲರ್​, ಐಸಿಸಿ ಏಕದಿನ ವಿಶ್ವಕಪ್​ ಫೈನಲ್​​ನಲ್ಲಿ ತೊಟ್ಟಿದ್ದ ಜರ್ಸಿ ಹರಾಜಿಗೆ ಇಡಲು ನಿರ್ಧರಿಸಿದ್ದಾರೆ. 29 ವರ್ಷದ ಯುವ ವಿಕೆಟ್​ ಕೀಪರ್​​​ ಫೈನಲ್​ನಲ್ಲಿ ತಾವು ತೊಟ್ಟಿದ್ದ ಜರ್ಸಿ ಹರಾಜಿಗೆ ಇಟ್ಟು, ಅದರಿಂದ ಬರುವ ಹಣವನ್ನ ಆಸ್ಪತ್ರೆಯಲ್ಲಿ ಕೊರೊನಾ ವೈರಸ್​ನಿಂದ ಬಳಲುತ್ತಿರುವವರ ಚಿಕಿತ್ಸೆಗೆ ನೀಡಲು ಮುಂದಾಗಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧ ನಡೆದಿದ್ದ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ ಸೂಪರ್​ ಓವರ್​ನಲ್ಲಿ ಗೆಲುವು ದಾಖಲು ಮಾಡುವ ಮೂಲಕ ಚೊಚ್ಚಲ ಬಾರಿಗೆ ವಿಶ್ವಕಪ್​ಗೆ ಮುತ್ತಿಕ್ಕಿತ್ತು.

ABOUT THE AUTHOR

...view details