ಲಂಡನ್:ಇಂಗ್ಲೆಂಡ್ನ ಸ್ಟಾರ್ ಓಪನರ್ ಜಾನಿ ಬೈರ್ಸ್ಟೋವ್ ಬಿಗ್ಬ್ಯಾಶ್ ಲೀಗ್ನಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ. ಅವರು ಇದೇ ಮೊದಲ ಬಾರಿಗೆ ಬಿಗ್ಬ್ಯಾಶ್ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ, ರಾಷ್ಟ್ರೀಯ ತಂಡದ ಜವಾಬ್ದಾರಿ ನಿರ್ವಹಿಸಬೇಕಾಗಿರುವುದರಿಂದ ಟೂರ್ನಿಯಿಂದ ಹಿಂದಿ ಸರಿಯುವುದಾಗಿ ಹೇಳಿದ್ದಾರೆ.
ಬೈರ್ಸ್ಟೋವ್ 10ನೇ ಬಿಗ್ಬ್ಯಾಶ್ ಲೀಗ್ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪರ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಲೀಗ್ ನಡೆಯುವ ಸಂದರ್ಭದಲ್ಲೇ ಇಂಗ್ಲೆಂಡ್ ತಂಡದ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ರಾಷ್ಟ್ರೀಯ ತಂಡದಿಂದ ಕರೆ ಬರುವ ಸಾಧ್ಯತೆ ಇರುವುದರಿಂದ ಟೂರ್ನಿಯಿಂದ ಹಿಂದಕ್ಕೆ ಸರಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ.