ಕರ್ನಾಟಕ

karnataka

ETV Bharat / sports

ಟೆಸ್ಟ್​ ಕ್ರಿಕೆಟ್​ನ ಇಸಿಬಿಯ ಕೇಂದ್ರ ಒಪ್ಪಂದದಿಂದ ಜಾನಿ ಬೈರ್ಸ್ಟೋವ್​ ಹೊರಕ್ಕೆ!! - ಇಂಗ್ಲೆಂಡ್ ಕ್ರಿಕೆಟ್​ ಬೋರ್ಡ್​

​ಕಳೆದ ಒಂದು ವರ್ಷದಲ್ಲಿ ಉತ್ತಮ ಪ್ರದರ್ಶನ ತೋರಿ ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮ ಮೊದಲ ಶತಕ ಬಾರಿಸಿರುವ ಜಾಕ್​ ಕ್ರಾಲೀ, ಒಲ್ಲಿ ಪೋಪ್​ ಮತ್ತು ಡಾಮ್ ಸಿಬ್ಲೀ ಟೆಸ್ಟ್​ ಕ್ರಿಕೆಟ್​ನಲ್ಲಿ ಮೊದಲ ಬಾರಿಗೆ ಕೇಂದ್ರ ಒಪ್ಪಂದ ಪಡೆದುಕೊಡುವಲ್ಲಿ ಸಫಲರಾಗಿದ್ದಾರೆ..

ಜಾನಿ ಬೈರ್ಸ್ಟೋವ್
ಜಾನಿ ಬೈರ್ಸ್ಟೋವ್

By

Published : Sep 30, 2020, 8:36 PM IST

ಲಂಡನ್ ​: ಇಂಗ್ಲೆಂಡ್ ಸೀಮಿತ ಓವರ್​ಗಳ ಸ್ಟಾರ್ ಬ್ಯಾಟ್ಸ್​ಮನ್​ ಜಾನಿ ಬೈರ್ಸ್ಟೋವ್​ 2020/21ರ ಆವೃತ್ತಿಯ ಟೆಸ್ಟ್​ ಕ್ರಿಕೆಟ್​ನ ಕೇಂದ್ರ ಗುತ್ತಿಗೆಯಿಂದ ಹೊರ ಬಿದ್ದಿದ್ದಾರೆ.

ಜಾನಿ ಬೈರ್ಸ್ಟೋವ್​ ಕಳೆದ ವರ್ಷ 2020ರ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರದ ಹಿನ್ನೆಲೆ ಅವರು ಟೆಸ್ಟ್​ ತಂಡದಿಂದ ಹೊರ ಬಿದ್ದಿದ್ದರು. ಅವರು 2020ರಲ್ಲಿ ಕೇವಲ ಒಂದು ಟೆಸ್ಟ್​ ಪಂದ್ಯ ಮಾತ್ರ ಆಡಿದ್ದರು. ಹೀಗಾಗಿ, 2021ರ ಆವೃತ್ತಿಯಲ್ಲಿ ರೆಡ್​ ಬಾಲ್​ ಕ್ರಿಕೆಟ್​ನಿಂದ ಹೊರ ಬಿದ್ದಿದ್ದಾರೆ. ಏಕದಿನ ಮತ್ತು ಟಿ20 ಪಂದ್ಯದಲ್ಲಿ ಅವಕಾಶ ಪಡೆದಿದ್ದಾರೆ. ಬೈರ್ಸ್ಟೋವ್ ಜೊತೆಗೆ ಮಾರ್ಕ್​ವುಡ್​ ಕೂಡ ಟೆಸ್ಟ್ ಒಪ್ಪಂದದಿಂದ ಹೊರ ಬಿದ್ದಿದ್ದಾರೆ.

​ಕಳೆದ ಒಂದು ವರ್ಷದಲ್ಲಿ ಉತ್ತಮ ಪ್ರದರ್ಶನ ತೋರಿ ತಮ್ಮ ಮೊದಲ ಶತಕ ಬಾರಿಸಿರುವ ಜಾಕ್​ ಕ್ರಾಲೀ, ಒಲ್ಲಿ ಪೋಪ್​ ಮತ್ತು ಡಾಮ್ ಸಿಬ್ಲೀ ಟೆಸ್ಟ್​ ಕ್ರಿಕೆಟ್​ನಲ್ಲಿ ಮೊದಲ ಬಾರಿಗೆ ಕೇಂದ್ರ ಒಪ್ಪಂದ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಟಾಮ್​ ಕರ್ರನ್​ ಮತ್ತು ಟಿ20 ಶ್ರೇಯಾಂಕದಲ್ಲಿ ನಂಬರ್ ಒನ್ ಶ್ರೇಯಾಂಕ ಪಡೆದಿರುವ ಡೇವಿಡ್ ಮಲಾನ್​ ಸೀಮಿತ ಓವರ್​ಗಳ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

ಟೆಸ್ಟ್​ ಕ್ರಿಕೆಟ್​ ಒಪ್ಪಂದ ಪಡೆದಿರುವ ಆಟಗಾರರು

ಜೇಮ್ಸ್ ಆಂಡರ್ಸನ್ (ಲಂಕಾಷೈರ್), ಜೋಫ್ರಾ ಆರ್ಚರ್ (ಸಸೆಕ್ಸ್), ಸ್ಟುವರ್ಟ್ ಬ್ರಾಡ್ (ನಾಟಿಂಗ್​ಹ್ಯಾಮ್​ಷೈರ್), ರೋನಿ ಬರ್ನ್ಸ್ (ಸರ್ರೆ), ಜೋಸ್ ಬಟ್ಲರ್ (ಲಂಕಾಷೈರ್),ಜಾಕ್​ ಕ್ರಾಲೆ (ಕೆಂಟ್), ಸ್ಯಾಮ್ ಕರ್ರನ್ (ಸರ್ರೆ), ಒಲ್ಲಿ ಪೋಪ್ (ಸರ್ರೆ), ಜೋ ರೂಟ್ (ಯಾರ್ಕ್‌ಷೈರ್), ಡಾಮ್ ಸಿಬ್ಲಿ (ವಾರ್ವಿಕ್‌ಷೈರ್), ಬೆನ್ ಸ್ಟೋಕ್ಸ್ (ಡರ್ಹಾಮ್), ಕ್ರಿಸ್ ವೋಕ್ಸ್ (ವಾರ್ವಿಕ್‌ಶೈರ್).

ಏಕದಿನ ಮತ್ತು ಟಿ20 ಒಪ್ಪಂದ ಪಡೆದಿರುವ ಆಟಗಾರರು

ಮೊಯಿನ್ ಅಲಿ (ವೋರ್ಸೆಸ್ಟರ್‌ಶೈರ್), ಜೋಫ್ರಾ ಆರ್ಚರ್ (ಸಸೆಕ್ಸ್), ಜಾನಿ ಬೈರ್ಸ್ಟೋವ್ (ಯಾರ್ಕ್‌ಷೈರ್), ಜೋಸ್ ಬಟ್ಲರ್ (ಲಂಕಾಷೈರ್), ಟಾಮ್ ಕರ್ರನ್ (ಸರ್ರೆ), ಇಯೊನ್ ಮಾರ್ಗನ್ (ಮಿಡ್ಲ್‌ಸೆಕ್ಸ್), ಆದಿಲ್ ರಶೀದ್ (ಯಾರ್ಕ್‌ಷೈರ್), ಜೋ ರೂಟ್ (ಯಾರ್ಕ್‌ಷೈರ್), ಜೇಸನ್ ರಾಯ್ (ಸರ್ರೆ), ಬೆನ್ ಸ್ಟೋಕ್ಸ್ (ಡರ್ಹಾಮ್), ಕ್ರಿಸ್ ವೋಕ್ಸ್ (ವಾರ್ವಿಕ್‌ಷೈರ್), ಮಾರ್ಕ್ ವುಡ್ (ಡರ್ಹಾಮ್).

ABOUT THE AUTHOR

...view details