ಲಂಡನ್: ಕ್ರಿಕೆಟ್ ಜಗತ್ತನ್ನು ಆಳುತ್ತಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ಫೋಟೋವನ್ನು wwe ಸೂಪರ್ ಸ್ಟಾರ್ ಜಾನ್ ಸೀನಾ ತಮ್ಮ ಇನ್ಸ್ಟಗ್ರಾಮ್ನಲ್ಲಿ ಶೇರ್ ಮಾಡಿಕೊಂಡು ಆಶ್ಚರ್ಯ ಮೂಡಿಸಿದ್ದಾರೆ.
ವಿಶ್ವದೆಲ್ಲೆಡೆ ಪ್ರಸಿದ್ಧಿಯಾಗಿರುವ wweನಲ್ಲಿ 16 ಬಾರಿ ವಿಶ್ವಚಾಂಪಿಯನ್ ಆಗಿರುವ ಜಾನ್ಸೀನಾ ಇನ್ಸ್ಟಾಗ್ರಾಮ್ನಲ್ಲಿ ಹಲವು ಬಾರಿ ಭಾರತೀಯರ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ವಿಚಿತ್ರವೆಂದರೆ ಫೋಟೋಗೆ ಯಾವುದೇ ತಲೆಬರಹ ಅಥವಾ ಅಡಿಬರಹ ನೀಡುವುದಿಲ್ಲ. ಆದರೆ, ಈ ಚಿತ್ರದಲ್ಲಿ ಕೊಹ್ಲಿ ಕೈಕುಲುಕಲು ನಿಂತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅವರ ನೆಚ್ಚಿನ ಸ್ಲೋಗನ್ ಆದ ' you can't see me' ಯಂತೆ ಈ ಫೋಟೋ ನೋಡುಗರಿಗೆ ಭಾಸವಾಗುತ್ತಿದೆ.