ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಒಂದೇ ವರ್ಷದಲ್ಲಿ ಮೂರು ಮಾದರಿಯ ಕ್ರಿಕೆಟ್ನಲ್ಲಿ ದೇಶ ಪ್ರತಿನಿಧಿಸುವ ಅವಕಾಶ ಪಡೆದಿದ್ದ ಇಂಗ್ಲೆಂಡ್ನ ಜೋಫ್ರ ಆರ್ಚರ್‌ಗೆ ಕನ್ನಡಿಗ ರಾಹುಲ್ ಎದುರು ಟಿ20ಯಲ್ಲಿ ಬೌಲಿಂಗ್ ಮಾಡಲು ಕಷ್ಟ ಎಂದು ಹೇಳಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ, ವಾರ್ನರ್, ಎಬಿಡಿ ವಿಲಿಯರ್ಸ್, ಕ್ರಿಸ್ ಗೇಲ್ ರಂತಹ ದಿಗ್ಗಜರಿಗೆ ಬೌಲಿಂಗ್ ಮಾಡಿರುವ ಆರ್ಚರ್ ಬೌಲಿಂಗ್ ಮಾಡಲು ಕಠಿಣವಾದ ಬ್ಯಾಟ್ಸ್‌ಮನ್ ಯಾರು? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕನ್ನಡಿಗ ರಾಹುಲ್ ಹೆಸರನ್ನು ಹೇಳಿದ್ದಾರೆ.
ಬಿಗ್ಬ್ಯಾಶ್, ಐಪಿಎಲ್ ಮೂಲಕ ಹೊರಬಂದ ಪ್ರತಿಭೆಯಾಗಿರುವ ಆರ್ಚರ್, ರಾಹುಲ್ರನ್ನು ಆಯ್ಕೆ ಮಾಡಿದ್ದಕ್ಕೆ ಇಶ್ ಸೋಧಿ ಕೂಡ ಒಪ್ಪಿಕೊಂಡಿದ್ದಾರೆ.
ಕಳೆದ ನ್ಯೂಜಿಲ್ಯಾಂಡ್ ಪ್ರವಾಸದ ವೇಳೆ ರಾಹುಲ್ 5 ಪಂದ್ಯಗಳ ಟಿ20 ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇವರ ಬ್ಯಾಟಿಂಗ್ನ ನೆರವಿನಿಂದ ಭಾರತ ತಂಡ 5-0ಯಲ್ಲಿ ಟಿ20 ಸರಣಿ ಗೆದ್ದುಕೊಂಡಿತ್ತು. ಇದಕ್ಕೆ ಸೋಧಿ ಕೂಡ ಆರ್ಚರ್ರ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ.
ಕೆ.ಎಲ್.ರಾಹುಲ್ 2019ರ ಐಪಿಎಲ್ ಸೀಸನ್ನಲ್ಲಿ 14 ಪಂದ್ಯಗಳಲ್ಲಿ 593 ರನ್‌ಗಳಿಸುವ ಮೂಲಕ ಅಧಿಕ ರನ್ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದರು.