ಲಂಡನ್: ಆಸ್ಟ್ರೇಲಿಯಾದ ರನ್ಮಷಿನ್ ಸ್ಟಿವ್ ಸ್ಮಿತ್ ಬ್ಯಾಟಿಂಗ್ ನಡೆಸುವ ವೇಳೆ ಜೋಫ್ರಾ ಆರ್ಚರ್ ಎಸೆದ ಬೌನ್ಸರ್ ತಗುಲಿ ಬಿದ್ದು ತೀವ್ರಗಾಯೊಂಡಿದ್ದರು.
ಬೌನ್ಸರ್ ತಗುಲಿ ಸ್ಮಿತ್ ಕೆಳಗೆ ಬಿದ್ದಿದ್ದರೆ ಬೌಲಿಂಗ್ ಮಾಡಿದ ಆರ್ಚರ್ ವಿಕೆಟ್ ಕೀಪರ್ ಜಾಸ್ ಬಟ್ಲರ್ ಜೊತೆಗೆ ನಗುತ್ತಾ ನಿಂತಿದ್ದರು. ಆರ್ಚರ್ ಹಾಗೂ ಬಟ್ಲರ್ ನಡವಳಿಕೆಗೆ ಕೆರಳಿರುವ ಕ್ರಿಕೆಟ್ ಅಭಿಮಾನಿಗಳು ಟ್ವಿಟರ್ನಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ.
ಮೊದಲ ಟೆಸ್ಟ್ನಲ್ಲಿ ಎರಡೂ ಇನ್ನಿಂಗ್ಸ್ನಲ್ಲೂ ಶತಕಸಿಡಿಸಿರುವ ಸ್ಮಿತ್ರನ್ನು ಔಟ್ ಮಾಡಲಾಗದೆ ಬೌನ್ಸರ್ ಮೊರೆ ಹೋಗಿದ್ದಾರೆ, ನಿಮಗೆ ಸ್ಮಿತ್ರನ್ನು ಔಟ್ ಮಾಡಲಾಗದೆ ಎಲ್ಲ ಎಸೆತಗಳನ್ನು ಅವರ ದೇಹದ ಮೇಲೆ ಪ್ರಯೋಗಿಸುತ್ತಿದ್ದೀರ ಎಂದು ಕ್ರಿಕೆಟ್ ಅಭಿಮಾಣಿಗಳು ಇಂಗ್ಲೆಂಡ್ ಕ್ರಿಕೆಟಿಗರ ಕಾಲೆಳೆಯುತ್ತಿದ್ದಾರೆ.
ಬಾಲ್ ಕುತ್ತಿಗೆಗೆ ಬಿದ್ದು ಒಬ್ಬ ಕ್ರಿಕೆಟಿಗ ನೋವಿನಿಂದ ನರಳಾಡುತ್ತಿದ್ದರೆ ಈ ರೀತಿ ನಗುವುದು ಕ್ರೀಡಾ ಸ್ಫೂರ್ತಿಯಲ್ಲ. ಆರ್ಚರ್-ಬಟ್ಲರ್ರಂಹ ಕ್ರೀಡಾಪಟುಗಳಿಗೆ ತಕ್ಕದಾದದ್ದಲ್ಲ. ಅವರಿಗೆ ಫಿಲಿಫ್ ಹ್ಯೂಸ್ಗೆ ಏನಾಯಿತು ಎಂಬುದನ್ನು ಗೊತ್ತಿಲ್ಲವೇ? ಎಂದು ಟ್ವಿಟ್ವಿಗರು ಪ್ರಶ್ನೆ ಮಾಡಿದ್ದಾರೆ.
ಈ ಘಟನೆ 77 ನೇ ಓವರ್ನಲ್ಲಿ ನಡೆದಿದ್ದು, 80 ರನ್ಗಳಿಸಿದ್ದ ಸ್ಮಿತ್ ಕ್ರೀಸ್ ತೊರೆದಿದ್ದರು. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ನಿಜಕ್ಕೂ ಆತಂಕ ತರಿಸಿದ್ದು ಮಾತ್ರ ಸುಳ್ಳಲ್ಲ. ಆದರೆ ಸ್ಮಿತ್ ಚಿಕಿತ್ಸೆ ಪಡೆದು ಪೀಟರ್ ಸಿಡ್ಲ್ ಔಟಾದ ನಂತರ ಮತ್ತೆ ಕ್ರೀಸ್ ಆಗಮಿಸಿ ಅದೇ ಓವರ್ನಲ್ಲಿ ಎರಡು ಭರ್ಜರಿ ಬೌಂಡರಿ ಬಾರಿಸಿದರು. ಆದರೆ 92 ರನ್ಗಳಿಸಿದ್ದ ವೇಳೆ ಕ್ರಿಸ್ ವೋಕ್ಸ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದು ತಮ್ಮ ಹ್ಯಾಟ್ರಿಕ್ ಶತಕ ಮಿಸ್ ಮಾಡಿಕೊಂಡರು.