ಕರ್ನಾಟಕ

karnataka

ETV Bharat / sports

ಪಾಕಿಸ್ತಾನಕ್ಕೆ ಹೋಗಿ ಕ್ರಿಕೆಟ್​ ಆಡುವುದನ್ನು ನಾನು ಇಷ್ಟ ಪಡುತ್ತೇನೆ: ಜೋ ರೂಟ್​ - ಇಂಗ್ಲೆಂಟ್​ ಪಾಕ್​ ಟೆಸ್ಟ್​ ಸರಣಿ

ಪಾಕಿಸ್ತಾನಕ್ಕೆ​ ತೆರಳಬೇಕು ಎಂಬ ಅಂತಿಮ ನಿರ್ಧಾರ ನನ್ನ ಕೈಯಲ್ಲಿಲ್ಲ. ಆದರೆ ಪಾಕ್​ಗೆ ಪ್ರವಾಸ ಕೈಗೊಳ್ಳುವುದನ್ನು ಇಷ್ಟ ಪಡುತ್ತೇನೆ ಎಂದು ರೂಟ್​ ಹೇಳಿದ್ದಾರೆ.

Joe Root
ಜೋ ರೂಟ್​

By

Published : Aug 19, 2020, 12:45 PM IST

ಸೌತಾಂಪ್ಟನ್​: ಪಾಕಿಸ್ತಾನಕ್ಕೆ ತೆರಳಿ ಕ್ರಿಕೆಟ್​ ಸರಣಿ ಆಡುವುದನ್ನು ನಾನು ಇಷ್ಟ ಪಡುತ್ತೇನೆಂದು ಇಂಗ್ಲೆಂಡ್​ ಟೆಸ್ಟ್​ ತಂಡದ ನಾಯಕ ಜೋ ರೂಟ್​ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ತೆರಳಬೇಕು ಎಂಬ ಅಂತಿಮ ನಿರ್ಧಾರ ನನ್ನ ಕೈಯಲ್ಲಿಲ್ಲ. ಆದರೆ ಪಾಕ್​ಗೆ ಪ್ರವಾಸ ಕೈಗೊಳ್ಳುವುದನ್ನು ಇಷ್ಟ ಪಡುತ್ತೇನೆ ಎಂದು ರೂಟ್​ ತಿಳಿಸಿದ್ದಾರೆ.

ನಾನು ಪಾಕಿಸ್ತಾನಕ್ಕೆ ಭೇಟಿ ನೀಡುವುದನ್ನು ಇಷ್ಟ ಪಡುತ್ತೇನೆ. ವೈಯಕ್ತಿಕವಾಗಿ ಅಲ್ಲಿಗೆ ತೆರಳಿ ಕ್ರಿಕೆಟ್​ ಆಡುವುದು ಒಂದು ಅದ್ಭುತ ಅವಕಾಶ ಎಂದು ನಾನು ಭಾವಿಸುತ್ತೇನೆ. ದುರದೃಷ್ಟವಶಾತ್​ ಅದೆಲ್ಲ ನನ್ನ ನಿರ್ಧಾರದ ಮೇಲಿಲ್ಲ. ಅಲ್ಲಿಗೆ ತೆರಳುವುದು ಮತ್ತು ಅಲ್ಲಿ ಕ್ರಿಕೆಟ್​ ಆಡಿದರೆ ಅದ್ಭುತವಾಗಿರುತ್ತದೆ. ಅಲ್ಲಿನ ಪಿಚ್​ಗಳು ಫ್ಲಾಟ್​ ಆಗಿರುತ್ತವೆ. ನಾವು ಇಲ್ಲಿ ಆಡುತ್ತಿರುವುದಕ್ಕಿಂತ ಅಲ್ಲಿ ತುಂಬಾ ಬದಲಾವಣೆಯಿರುತ್ತದೆ ಎಂದಿದ್ದಾರೆ.

ಜೋ ರೂಟ್​

ಕಳೆದ ವರ್ಷ ಪಾಕಿಸ್ತಾನದಲ್ಲಿ ಟೆಸ್ಟ್​ ಕ್ರಿಕೆಟ್ ಮರಳಿದಾಗ ಅಲ್ಲಿನ ಜನರ ಭಾವನೆಗಳನ್ನು ನೀವು ನೋಡಿರಬಹುದು. ಇದರ ಬಗ್ಗೆ ಕೆಲವು ಆಟಗಾರರ ಜೊತೆ ಮಾತನಾಡಿದಾಗ ಅವರೂ ಕೂಡ ಪಾಕಿಸ್ತಾನದಲ್ಲಿ ಕ್ರಿಕೆಟ್ ಮರಳಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋವಿಡ್-19ನಿಂದ ಈಗಾಗಲೇ ಕೆಲವು ಸರಣಿಗಳನ್ನು ಕಳೆದುಕೊಂಡಿರುವುದರಿಂದ ಕಾರ್ಯನಿರತವಾದ ವೇಳಾಪಟ್ಟಿಯನ್ನ ಹೊಂದಿದ್ದೇವೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ ಎಂದಿದ್ದಾರೆ.

ಪಾಕಿಸ್ತಾನಕ್ಕೆ ಇಂಗ್ಲೆಂಡ್​ ಕೊನೆಯ ಬಾರಿ 2005-06ರಲ್ಲಿ ಪ್ರವಾಸ ಕೈಗೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಭದ್ರತಾ ಕಾರಣದಿಂದ ಆಂಗ್ಲರ ತಂಡ ಅಲ್ಲಿಗೆ ತೆರಳಿಲ್ಲ. 2009ರಲ್ಲಿ ಶ್ರೀಲಂಕಾ ತಂಡದ ಮೇಲೆ ಭಯೋತ್ಪದಕರ ದಾಳಿಯ ನಂತರ ಪಾಕಿಸ್ತಾನದಲ್ಲಿ ಕ್ರಿಕೆಟ್​ ಸ್ಥಗಿತಗೊಂಡಿತ್ತು.

ನಂತರ ಪಾಕಿಸ್ತಾನ ತನ್ನ ತವರು ಪಂದ್ಯಗಳನ್ನು ಯುಎಇನಲ್ಲಿ ನಡೆಸುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನಕ್ಕೆ ವೆಸ್ಟ್​ ಇಂಡೀಸ್​, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಭೇಟಿ ನೀಡಿ ಕೆಲವು ಸರಣಿಗಳನ್ನಾಡಿವೆ.

ಕೋವಿಡ್​-19 ಸಾಂಕ್ರಾಮಿಕ ಸಮಯದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರಿಂದ ಇಂಗ್ಲೆಂಡ್ ಕೂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಬೇಕು ಎಂದು ವಾಸಿಮ್ ಅಕ್ರಮ್ ಹೇಳಿದ್ದಾರೆ. ಇದರ ಬೆನ್ನಲ್ಲೇ ರೂಟ್​ ಕೂಡ ಪಾಕ್​ಗೆ ಭೇಟಿ ನೀಡುವ ಆಸಕ್ತಿ ತೋರಿಸಿರುವುದರಿಂದ ಪಾಕ್​ ಕ್ರಿಕೆಟ್​ನಲ್ಲಿ ಬದಲಾವಣೆ ಗಾಳಿ ಬೀಸಬಹುದು ಎನ್ನಲಾಗುತ್ತಿದೆ.

ABOUT THE AUTHOR

...view details