ಸೌತಾಂಪ್ಟನ್: ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯ ಇಂದು ನಡೆಯಲಿದ್ದು, ಇಂಗ್ಲೆಂಡ್‌ನ 81ನೇ ಟೆಸ್ಟ್ ನಾಯಕನಾಗಿರುವ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ನಾಯಕ ಜೋ ರೂಟ್ ಅವರ ನೀಡಿದ ಸಲಹೆಯನ್ನು ಬಹಿರಂಗಪಡಿಸಿದ್ದಾರೆ.
ಇಂದು ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ತಮ್ಮ ಎರಡನೇ ಮಗುವನ್ನು ನಿರೀಕ್ಷೆಯಲ್ಲಿರುವ ರೂಟ್ ಪತ್ನಿಯೊಂದಿಗೆ ಇರಲು ಬಯಸಿದ್ದು, ಅವರು ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದರಿಂದ ತಂಡದ ನಾಯಕತ್ವದ ಜವಾಬ್ದಾರಿಯನ್ನ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ಗೆ ನೀಡಲಾಗಿದೆ.
"ನಾನು ನಿಮಗೆ ಹೆಚ್ಚು ಸಲಹೆ ನೀಡುವುದಿಲ್ಲ, ಸಾಕಷ್ಟು ವಿಷಯಗಳು ನಿಮ್ಮ ಮನಸ್ಸಿನಲ್ಲಿ ಓಡುತ್ತಿರುತ್ತವೆ," ಎಂದು ಸುದ್ದಿಗಾರರಿಗೆ ತಿಳಿಸಿದರು. "ಬ್ಲೇಜರ್‌ನೊಂದಿಗೆ ಫೋಟೊ ತೆಗೆಯುವಾಗ ಅತ್ಯುತ್ತಮ ಸಂದೇಶವನ್ನು ಸ್ವೀಕರಿಸಿದ್ದೇನೆ. ಖಾಯಂ ನಾಯಕ ಜೋ ರೂಟ್ ಅವರು, 'ನಿನ್ನ ಹಾದಿಯಲ್ಲಿ ನೀನು ತಂಡವನ್ನು ಮುನ್ನೆಡಸು' ಎಂಬ ಸಲಹೆ ನೀಡಿದ್ದಾರೆ ಎಂದು ಸ್ಟೋಕ್ಸ್ ಬಹಿರಂಗ ಪಡಿಸಿದ್ದಾರೆ.
ಅಂಗಳದಲ್ಲಿ ಅಗತ್ಯಬಿದ್ದಾಗ ಹಿರಿಯ ಅನುಭವಿ ಆಟಗಾರರಿಂದ ಸೂಕ್ತ ಸಲಹೆಯನ್ನು ಪಡೆಯಲು ಪ್ರಯತ್ನಿಸುತ್ತೇನೆ. ಜೋ ರೂಟ್ ಕುಟುಂಬದ ಕಾರಣದಿಂದ ಪಂದ್ಯಕ್ಕೆ ಅಲಭ್ಯರಾಗಿದ್ದರೂ ಹಾಗೂ ಮನೆಯಲ್ಲಿದ್ದರು ನಮಗೆ ಲಭ್ಯರಿರುತ್ತಾರೆ ಎಂಬ ವಿಷಯವನ್ನು ಇದೇ ವೇಳೆ ಬೆನ್ ಸ್ಟೋಕ್ಸ್ ಹಂಚಿಕೊಂಡರು.