ಕರ್ನಾಟಕ

karnataka

ETV Bharat / sports

'ಜಸ್ಟೀಸ್ ಫಾರ್ ಸೂರ್ಯಕುಮಾರ್ ಯಾದವ್'​: ಆಯ್ಕೆ ಸಮಿತಿ ವಿರುದ್ಧ ಸಿಡಿದೆದ್ದ ನೆಟ್ಟಿಗರು - ಸೂರ್ಯ ಕುಮಾರ್ ಯಾದವ್

ಸೋಮವಾರ ಬಿಸಿಸಿಐ ಆಸ್ಟ್ರೇಲಿಯಾ ಪ್ರವಾಸಕ್ಕೆ ಮೂರು ಮಾದರಿಯ ಕ್ರಿಕೆಟ್​ಗೂ ತಂಡವನ್ನು ಆಯ್ಕೆ ಮಾಡಿದ್ದು, ಕೋಟ್ಯಾಂತರ ಭಾರತೀಯ ಅಭಿಮಾನಿಗಳ ನಿರೀಕ್ಷೆಯಾಗಿದ್ದ ಸೂರ್ಯಕುಮಾರ್​ರನ್ನು ಬಿಸಿಸಿಐ ಆಯ್ಕೆ ಸಮಿತಿ ಕಡೆಗಣಿಸಿದೆ.

ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್

By

Published : Oct 26, 2020, 11:46 PM IST

ಮುಂಬೈ: ಕಳೆದ ಎರಡು-ಮೂರು ವರ್ಷಗಳಿಂದ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲೂ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಮುಂಬೈನ ಯುವ ಬ್ಯಾಟ್ಸ್​ಮನ್​ ಸೂರ್ಯಕುಮಾರ್ ಯಾದವ್​ಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವಕಾಶ ನೀಡದಿರುವುದಕ್ಕೆ ಟ್ವಿಟರ್​ನಲ್ಲಿ ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಸೋಮವಾರ ಬಿಸಿಸಿಐ ಆಸ್ಟ್ರೇಲಿಯಾ ಪ್ರವಾಸಕ್ಕೆ ಮೂರು ಮಾದರಿಯ ಕ್ರಿಕೆಟ್​ಗೂ ತಂಡವನ್ನು ಆಯ್ಕೆ ಮಾಡಿದ್ದು, ಕೋಟ್ಯಾಂತರ ಭಾರತೀಯ ಅಭಿಮಾನಿಗಳ ನಿರೀಕ್ಷೆಯಾಗಿದ್ದ ಸೂರ್ಯಕುಮಾರ್​ರನ್ನು ಬಿಸಿಸಿಐ ಆಯ್ಕೆ ಸಮಿತಿ ಕಡೆಗಣಿಸಿದೆ.

ಆಶ್ಚರ್ಯವೆಂದರೆ ಬಿಸಿಸಿಐ ಆಯ್ಕೆ ಸಮಿತಿ ಕೆಲವು ಅನಾನುಭವಿಗಳಿಗೆ ಅವಕಾಶ ನೀಡಿದೆ. ವರುಣ್​ ಚಕ್ರವರ್ತಿಗೆ ತಮಿಳುನಾಡಿನ ಪರ ಟಿ20 ಕ್ರಿಕೆಟ್ ಆಡಿಲ್ಲವಾದರೂ ಆಗಲೇ ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡಲಾಗಿದೆ. ಫಾರ್ಮ್​ನಲ್ಲಿಲ್ಲದ ಶುಬ್ಮನ್ ಗಿಲ್ ಏಕದಿನ ತಂಡದಲ್ಲಿ ಅವಕಾಶ ನೀಡಿದೆ.

ಸೂರ್ಯಕುಮಾರ್​ ಕುಮಾರ್​ ಯಾದವ್ ಎಲ್ಲಾ ಕ್ರಮಾಂಕಕ್ಕೂ ಸರಿಹೊಂದುವ ಬ್ಯಾಟ್ಸ್​ಮನ್ ಆಗಿದ್ದು, ಅವರನ್ನು ಆಯ್ಕೆ ಮಾಡದಿದ್ದಕ್ಕೆ ಕರ್ನಾಟಕದ ಮಾಜಿ ಸ್ಪಿನ್ನರ್ ಸುನೀಲ್ ಜೋಶಿ ನೇತೃತ್ವದ ಆಯ್ಕೆ ಸಮಿತಿಯ ನಿರ್ಧಾರದಿಂದ ಅಭಿಮಾನಿಗಳು ಕಿಡಿಕಾರಿದ್ದಾರೆ. ಜಸ್ಟೀಸ್ ಫಾರ್ ಸೂರ್ಯಕುಮಾರ್ ಯಾದವ್ ಎಂದು ಟ್ವಿಟರ್​ನಲ್ಲಿ ಟ್ರೆಂಡ್ ಮಾಡಲಾಗುತ್ತಿದೆ.

ABOUT THE AUTHOR

...view details