ಕರ್ನಾಟಕ

karnataka

ETV Bharat / sports

ಮಹಿಳಾ ಟಿ-20 ವಿಶ್ವಕಪ್​: ಶ್ರೀಲಂಕಾ ವಿರುದ್ಧ ಕಿವೀಸ್​​​ಗೆ​ 7 ವಿಕೆಟ್​ಗಳ ಭರ್ಜರಿ ಜಯ - ಸೂಪಿ ಡಿವೈನ್​ ಅರ್ಧಶತಕ

ಶ್ರೀಲಂಕಾ ತಂಡದಿಂದ 128 ರನ್​ಗಳ ಸಾಧಾರಣ ಗುರಿ ಪಡೆದ ನ್ಯೂಜಿಲ್ಯಾಂಡ್ ಸೂಫಿ ಡಿವೈನ್​ ಅಬ್ಬರದ ಅರ್ಧಶತಕದ ನೆರವಿನಿಂದ 17.3 ಓವರ್​​ಗಳಲ್ಲಿ 3 ವಿಕೆಟ್​ ಕಳೆದುಕೊಂಡು ಗೆಲುವಿನ ನಗೆ ಬೀರಿತು.

Womens T20 world cup
ಮಹಿಳಾ ಟಿ20 ವಿಶ್ವಕಪ್

By

Published : Feb 22, 2020, 8:36 PM IST

ಪರ್ತ್​:ಮಹಿಳೆಯರ ಟಿ-20 ವಿಶ್ವಕಪ್​ನ 3ನೇ ಪಂದ್ಯದಲ್ಲಿ ಹೇಲಿ ಜೆನ್ಸೆನ್ ಬೌಲಿಂಗ್​ ಹಾಗೂ ನಾಯಕಿ ಸೋಫಿ ಡಿವೈನ್​ರ ಭರ್ಜರಿ ಅರ್ಧಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್​ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್​ ಗೆದ್ದ ನ್ಯೂಜಿಲ್ಯಾಂಡ್​ ಬೌಲಿಂಗ್​ ಆಯ್ದುಕೊಂಡಿತು. ಶ್ರೀಲಂಕಾ ತಂಡ ನಾಯಕಿ ಚಾಮರಿ ಅಟಪಟ್ಟು 41, ಹಸಿನಿ ಪೆರೆರಾ 20 ಹಾಗೂ ಹರ್ಷಿತಾ ಮಾಧವಿ ಅವರ 27 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 127 ರನ್​ಗಳಿಸಲಷ್ಟೇ ಶಕ್ತವಾಯಿತು.

ಕಿವೀಸ್​ ಪರ ಅದ್ಭುತ ಬೌಲಿಂಗ್​ ನಡೆಸಿದ ಹೇಲಿ ಜೆನ್ಸೆನ್​ 16 ರನ್​ಗಳಿಗೆ ಮೂರು ವಿಕೆಟ್​, ಅಮೆಲಿಯಾ ಕೆರ್​ 21ಕ್ಕೆ 2 ವಿಕೆಟ್​ ಪಡೆದರೆ, ಡಿವೈನ್ ಹಾಗೂ ತಹುಹು ತಲಾ ಒಂದು ವಿಕೆಟ್​ ಪಡೆದರು.

128 ರನ್​ಗಳ ಸಾಧಾರಣ ಗುರಿ ಪಡೆದ ನ್ಯೂಜಿಲ್ಯಾಂಡ್ ಸೂಫಿ ಡಿವೈನ್​ ಅಬ್ಬರದ ಅರ್ಧಶತಕದ ನೆರವಿನಿಂದ 17.3 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು ಗೆಲುವಿನ ನಗೆ ಬೀರಿತು.

55 ಎಸೆತೆಗಳನ್ನೆದುರಿಸಿದ ಡಿವೈನ್​ 2 ಸಿಕ್ಸರ್​ ಹಾಗೂ 6 ಬೌಂಡರಿ ನೆರವಿನಿಂದ 75 ರನ್ ​ಗಳಿಸಿದರು. ಇವರಿಗೆ ಸಾಥ್​​ ನೀಡಿದ ಮ್ಯಾಡಿ ಗ್ರೀನ್​ 29 ರನ್ ​ಗಳಿಸಿದರು. ಪ್ರಿಸ್ಟ್​ 6, ವಿಶ್ವದ ನಂಬರ್​ ಒನ್​ ಬ್ಯಾಟರ್​​ ಸೂಜಿ ಬೇಟ್ಸ್​ 13 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. ಶ್ರೀಲಂಕಾ ಪರ ಅಟಪಟ್ಟು ಹಾಗೂ ಕವಿಶಾ ದಿಲ್ಹಾರಿ ತಲಾ ಒಂದು ವಿಕೆಟ್​ ಪಡೆದರು.

ಫೆ. 27ರಂದು ಕಿವೀಸ್​ ಭಾರತವನ್ನು, ಶ್ರೀಲಂಕಾ ಫೆ. 24ರಂದು ಆಸ್ಟ್ರೇಲಿಯಾ ಸವಾಲನ್ನು ಎದುರಿಸಲಿವೆ.

ABOUT THE AUTHOR

...view details