ಜಮೈಕಾ: ಟೆಸ್ಟ್ ಚಾಂಪಿಯನ್ಶಿಪ್ನ ಅಂತಿಮ ಪಂದ್ಯದಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ ದಳಿಗೆ ನಲುಗಿದ ವೆಸ್ಟ್ ಇಂಡೀಸ್ ತಂಡ ಅಲ್ಪ ಮೊತ್ತಕ್ಕೆ ಕುಸಿತ ಕಂಡು ಸಂಕಷ್ಟಕ್ಕೆ ಸಿಲುಕಿದೆ.
264 ರನ್ಗಳಿಂದ ದ್ವಿತೀಯ ದಿನದ ಆಟ ಶುರು ಮಾಡಿದ ಟೀಂ ಇಂಡಿಯಾ ಆಟಗಾರರು ವಿಂಡೀಸ್ ಬೌಲರ್ಗಳ ಬೆವರಿಳಿಸಿದ್ರು. ಮೊದಲ ಟೆಸ್ಟ್ ಪಂದದಲ್ಲಿ ಶತಕದಿಂದ ವಂಚಿತರಾಗಿದ್ದ ಹನುಮ ವಿಹಾರಿ ದ್ವಿತೀಯ ಟೆಸ್ಟ್ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ರು.
ವಿಹಾರಿ ಜೊತೆ ಉತ್ತಮ ಆಟವಾಡಿದ ವೇಗಿ ಇಶಾಂತ್ ಶರ್ಮಾ ವಿಂಡೀಸ್ ಬೌಲರ್ಗಳ ಬೆವರಿಳಿಸಿದ್ರು. ಭರ್ಜರಿ 7 ಬೌಡರಿಗಳ ನೆರವಿನಿಂದ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಅರ್ಧಶತಕ ಗಳಿಸಿದ್ರು. ಅಂತಿಮವಾಗಿ ಟೀಂ ಇಂಡಿಯಾ 140.1 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 416 ರನ್ ಗಳಿಸಿತು.
ಮೊದಲ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡಕ್ಕೆ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ ಭಾರೀ ಆಘಾತ ನೀಡಿದ್ರು. ಬುಮ್ರಾ ದಾಳಿಗೆ ಕಕ್ಕಾಬಿಕ್ಕಿಯಾದ ಕೆರಿಬಿಯನ್ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದ್ರು. 8ನೇ ಓವರ್ನಲ್ಲಿ ಶಮರ್ ಬ್ರೂಕ್ಸ್, ರೋಸ್ಟನ್ ಚೇಸ್, ಕ್ರೇಗ್ ಬ್ರಾಥ್ವೈಟ್ ವಿಕೆಟ್ ಪಡೆದ ಬುಮ್ರಾ ಹ್ಯಾಟ್ರಿಕ್ ಸಾಧನೆ ಮಾಡಿದ್ರು. ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ್ರು.
ಅಂತಿಮವಾಗಿ ದ್ವಿತೀಯ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 33 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 87 ರನ್ ಗಳಿಸಿತು. ವಿಂಡೀಸ್ ಪರ ಶಿಮ್ರಾನ್ ಹೇಟ್ಮಯರ್ 34, ಜಾಸನ್ ಹೋಲ್ಡರ್ 18 ರನ್ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಆಟಗಾರು ಹೇಳಿಕೊಳ್ಳುವ ಪ್ರದರ್ರಶನ ತೋರಲಿಲ್ಲ. ಟೀಂ ಇಂಡಿಯಾ ಪರ ಬುಮ್ರಾ 6 ವಿಕೆಟ್ ಗಳಿಸಿದ್ರೆ, ಮೊಹಮ್ಮದ್ ಶಮಿ 1 ವಿಕೆಟ್ ಕಬಳಿಸಿದ್ರು.