ಲೀಡ್ಸ್: ವಿಶ್ವ ಏಕದಿನ ಕ್ರಿಕೆಟ್ನ ನಂಬರ್ ಒನ್ ಬೌಲರ್ ಆಗಿರುವ ಬುಮ್ರಾ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಗೊಂಡಿದೆ.
ಇಂದು ಲಂಕಾ ವಿರುದ್ಧ ನಡೆಯುತ್ತಿರುವ ವಿಶ್ವಕಪ್ನ ಕೊನೆಯ ಲೀಗ್ ಪಂದ್ಯದಲ್ಲಿ ಲಂಕಾ ನಾಯಕ ಕರುಣರತ್ನೆ ವಿಕೆಟ್ ಪಡೆಯುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ 100ನೇ ವಿಕೆಟ್ ಪಡೆದಿದ್ದಾರೆ. ಅಲ್ಲದೆ 57ನೇ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡುವ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ವಿಶ್ವದ 9ನೇ ಹಾಗೂ ಭಾರತದ ಎರಡನೇ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದರು.
ಬುಮ್ರಾಗಿಂತ ಮೊದಲು ಭಾರತದ ಮೊಹಮ್ಮದ್ ಶಮಿ 56 ಏಕದಿನ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ವೇಗವಾಗಿ 100 ವಿಕೆಟ್ ಪಡೆದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಖಾನ್ 44 ಪಂದ್ಯಗಳಲ್ಲಿ ವಿಕೆಟ್ಗಳ ಶತಕ ಬಾರಿಸಿದ್ದರು. ನಂತರದ ಸ್ಥಾನದಲ್ಲಿ ಆಸೀಸ್ ವೇಗಿ ಸ್ಟಾರ್ಕ್ ಇದ್ದು, ಅವರು 52 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.