ಕರ್ನಾಟಕ

karnataka

ETV Bharat / sports

ಇದು ಟೆಸ್ಟ್ ಕ್ರಿಕೆಟ್​ನಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ ಬೆಸ್ಟ್​ ಮೊಮೆಂಟ್! - ಟೆಸ್ಟ್ ಕ್ರಿಕೆಟ್

ಜೊಹಾನ್ಸ್​ಬರ್ಗ್​ನಲ್ಲಿ ನಡೆದ ಪಂದ್ಯದಲ್ಲಿ 5 ವಿಕೆಟ್ ಪಡೆದಿದ್ದು ನನ್ನ ಟೆಸ್ಟ್​ ಕ್ರಿಕೆಟ್ ಜೀವನದ ಬೆಸ್ಟ್​ ಮೊಮೆಂಟ್​ ಎಂದು ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಸಂತಸ ವ್ಯಕ್ತಪಡಿಸಿದ್ದಾರೆ.

ಜಸ್ಪ್ರಿತ್ ಬುಮ್ರಾ

By

Published : Sep 13, 2019, 10:43 PM IST

ನವದೆಹಲಿ:ತಾನುಆಡಿದ 12 ಟೆಸ್ಟ್​ ಪಂದ್ಯಗಳಲ್ಲಿ 5 ಬಾರಿ 5 ವಿಕೆಟ್ ಪಡೆದು ದಾಖಲೆ ಬರೆದಿರುವ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ ತಮ್ಮ ಟೆಸ್ಟ್ ಕ್ರಿಕೆಟ್​ನ ಬೆಸ್ಟ್​ ಮೊಮೆಂಟ್​ ಬಗ್ಗೆ ಹೇಳಿಕೊಂಡಿದ್ದಾರೆ.

ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್​ ಸರಣಿ ಮೂಲಕ ಟೆಸ್ಟ್​ ಕ್ರಿಕೆಟ್​ಗೆ ಬುಮ್ರಾ ಪದಾರ್ಪಣೆ ಮಾಡಿದ್ದರು. ಅದೇ ಸರಣಿಯಲ್ಲಿ ಜೊಹಾನ್ಸ್​ಬರ್ಗ್​ನಲ್ಲಿ ನಡೆದ ಪಂದ್ಯದಲ್ಲಿ 5 ವಿಕೆಟ್ ಪಡೆದಿದ್ದು, ನನ್ನ ಟೆಸ್ಟ್​ ಕ್ರಿಕೆಟ್​ನ ಅತ್ಯುತ್ತಮ ಕ್ಷಣ​ ಎಂದು ಬುಮ್ರಾ ರಿವೀಲ್ ಮಾಡಿದ್ದಾರೆ.

ಜಸ್ಪ್ರಿತ್ ಬುಮ್ರಾ

ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ನನಗೆ ಟೆಸ್ಟ್​ ಕ್ರಿಕೆಟ್ ತುಂಬಾ ಮುಖ್ಯ, ಹೀಗಾಗಿ ಹೆಚ್ಚೆಚ್ಚು ಟೆಸ್ಟ್​ ಪಂದ್ಯಗಳನ್ನ ಆಡಲು ಬಯಸುತ್ತೇನೆ ಎಂದಿದ್ದಾರೆ.

ಅಲ್ಲದೇ ದೇಶಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಅದೇ ಪ್ರದರ್ಶನವನ್ನು ಟೆಸ್ಟ್​ನಲ್ಲಿ ಮುಂದುವರೆಸುವ ಆಸೆ ಇದೆ ಎಂದಿದ್ದಾರೆ. ಬಿಳಿ ಜರ್ಸಿ ತೊಟ್ಟು ಮೈದಾನಕ್ಕಿಳಿಯುವುದೇ ದೊಡ್ಡ ಸಂತೋಷದ ವಿಚಾರ. ತಂಡದ ಗೆಲುವಿನಲ್ಲಿ ನನ್ನ ಕಾಣಿಕೆ ಇದ್ದರೆ ಅಷ್ಟೆ ಸಾಕು ಎಂದು ಹೇಳಿದ್ರು.

ಇಲ್ಲಿಯವರೆಗೆ ಒಟ್ಟು 12 ಟೆಸ್ಟ್​ ಪಂದ್ಯಗಳನ್ನು ಆಡಿರುವ ಅವರು 62 ವಿಕೆಟ್ ಕಬಳಿಸಿದ್ದು, 5 ಬಾರಿ 5 ವಿಕೆಟ್​ಗಳ ಗುಚ್ಚ ಪಡೆದಿದ್ದಾರೆ.

ABOUT THE AUTHOR

...view details