ಅಬುಧಾಬಿ:ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಐಪಿಎಲ್ನಲ್ಲಿ 100 ವಿಕೆಟ್ ಹಾಗೂ ಟಿ-20 ಕ್ರಿಕೆಟ್ನಲ್ಲಿ 200 ವಿಕೆಟ್ ಪೂರ್ಣಗೊಳಿಸಿದ್ದಾರೆ.
ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಟಿ-20 ಕ್ರಿಕೆಟ್ನಲ್ಲಿ 2 ದಾಖಲೆ ಬರೆದ ಬುಮ್ರಾ - ಟಿ20 ಕ್ರಿಕೆಟ್ನಲ್ಲಿ ಬುಮ್ರಾ 200 ವಿಕೆಟ್
2013ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಬುಮ್ರಾ ತಮ್ಮ 89ನೇ ಪಂದ್ಯದಲ್ಲಿ 100 ವಿಕೆಟ್ ಪಡೆದಿದ್ದು ಒಂದು ಕಡೆಯಾದರೆ, ಟಿ-20 ಕ್ರಿಕೆಟ್ನಲ್ಲಿ 200 ವಿಕೆಟ್ ಪಡೆದ ಭಾರತದ ಮೊದಲ ವೇಗದ ಬೌಲರ್ ಎನಿಸಿಕೊಂಡರು.
12ನೇ ಓವರ್ನಲ್ಲಿ ಬೌಲಿಂಗ್ ಬಂದ ಬುಮ್ರಾ ವಿರಾಟ್ ಕೊಹ್ಲಿ ಅವರನ್ನ ಔಟ್ ಮಾಡುವ ಮೂಲಕ ಈ ಮೈಲಿಗಲ್ಲು ತಲುಪಿದರು. ಬುಮ್ರಾರ ಐಪಿಎಲ್ನ ಮೊದಲ ಮತ್ತು 100ನೇ ವಿಕೆಟ್ ಕೊಹ್ಲಿಯಾದರು. ಜೊತೆಗೆ ಐಪಿಎಲ್ನಲ್ಲಿ 100 ವಿಕೆಟ್ ಪಡೆದ 16ನೇ ಬೌಲರ್ ಹಾಗೂ 3ನೇ ಕಿರಿಯ ಬೌಲರ್ ಎಂಬ ದಾಖಲೆಗೂ ಪಾತ್ರರಾದರು. ಬುಮ್ರಾ 26 ವರ್ಷ 372 ದಿನಗಳಲ್ಲಿ ಈ ಸಾಧನೆ ಮಾಡಿದ್ದರೆ, ಚಾವ್ಲಾ 26 ವರ್ಷ 117 ದಿನಗಳಲ್ಲಿ 100 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ.
2013ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಬುಮ್ರಾ ತಮ್ಮ 89ನೇ ಪಂದ್ಯದಲ್ಲಿ 100 ವಿಕೆಟ್ ಪಡೆದಿದ್ದು ಒಂದು ಕಡೆಯಾದರೆ, ಟಿ-20 ಕ್ರಿಕೆಟ್ನಲ್ಲಿ 200 ವಿಕೆಟ್ ಪಡೆದ ಭಾರತದ ಮೊದಲ ಹಾಗೂ ವೇಗದ ಬೌಲರ್ ಎನಿಸಿಕೊಂಡರು. ಬುಮ್ರಾ ಈ ದಾಖಲೆಯನ್ನು ಅಮಿತ್ ಮಿಶ್ರಾ ಅವರ ಜೊತೆ ಹಂಚಿಕೊಂಡರು. ಮಿಶ್ರಾ ಹಾಗೂ ಬುಮ್ರಾ ಇಬ್ಬರು 168 ಪಂದ್ಯಗಳಲ್ಲಿ 200 ವಿಕೆಟ್ ಪಡೆದಿದ್ದಾರೆ.