ಕರ್ನಾಟಕ

karnataka

ETV Bharat / sports

ಐಸಿಸಿ ಟೆಸ್ಟ್​ ಬೌಲರ್​ ರ‍್ಯಾಂಕಿಂಗ್‌: ಟಾಪ್​ 10 ರಿಂದ ಹೊರಬಿದ್ದ ಜಸ್ಪ್ರೀತ್​​ ಬುಮ್ರಾ - ಟಾಪ್​ 10ರಿಂದ ಹೊರಬಿದ್ದ ಬುಮ್ರಾ

ಕೇವಲ 12 ಟೆಸ್ಟ್​ ಪಂದ್ಯಗಳಲ್ಲೇ ಬೌಲಿಂಗ್​ ಶ್ರೇಯಾಂಕದಲ್ಲಿ ಅದ್ಭುತ ಪ್ರದರ್ಶನ ನೀಡಿ ಶ್ರೇಯಾಂಕದಲ್ಲಿ 3ನೇ ಸ್ಥಾನ ಸಂಪಾದಿಸಿದ್ದ ಬುಮ್ರಾ ಕಿವೀಸ್​ ವಿರುದ್ಧ ನೀರಸ ಪ್ರದರ್ಶನ ತೋರಿದ ಬೆನ್ನಲ್ಲೇ ಟಾಪ್​ 10 ರಿಂದ ಹೊರಬಿದ್ದಿದ್ದಾರೆ.

Jasprit Bumrah out of top 10 rank
10ರಿಂದ ಹೊರಬಿದ್ದ ಜಸ್ಪ್ರೀತ್​​ ಬುಮ್ರಾ

By

Published : Feb 26, 2020, 8:37 PM IST

ಕ್ರೈಸ್ಟ್​ಚರ್ಚ್​: ಟೆಸ್ಟ್​ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ವೇಗವಾಗಿ ಟಾಪ್​ 5ಕ್ಕೆ ಎಂಟ್ರಿಕೊಟ್ಟಿದ್ದ ಭಾರತದ ವೇಗಿ ಜಸ್ಪ್ರೀತ್​ ಬುಮ್ರಾ ನ್ಯೂಜಿಲ್ಯಾಂಡ್​ ವಿರುದ್ಧ ಕಳಪೆ ಬೌಲಿಂಗ್​ ಪ್ರದರ್ಶನ ತೋರಿದ ಬೆನ್ನಲ್ಲೇ ಟಾಪ್​ 5ರಿಂದ ಹೊರಬಿದ್ದಾರೆ.

2018ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಬುಮ್ರಾ ಕೇವಲ 12 ಟೆಸ್ಟ್​ ಪಂದ್ಯಗಳಲ್ಲೇ ಬೌಲಿಂಗ್​ ಶ್ರೇಯಾಂಕದಲ್ಲಿ ಅದ್ಭುತ ಪ್ರದರ್ಶನ ನೀಡಿ ಶ್ರೇಯಾಂಕದಲ್ಲಿ 3ನೇ ಸ್ಥಾನ ಸಂಪಾದಿಸಿದ್ದರು. ನಂತರ ಬೆನ್ನು ನೋವಿಗೆ ತುತ್ತಾಗಿ ಕೆಲವು ತಿಂಗಳು ಕ್ರಿಕೆಟ್​ನಿಂದ ದೂರ ಉಳಿದಿದ್ದ ಅವರು ನ್ಯೂಜಿಲ್ಯಾಂಡ್​ ವಿರುದ್ಧ ಮತ್ತೆ ಟೆಸ್ಟ್​ ಕ್ರಿಕೆಟ್​​ಗೆ​ ಮರಳಿದ್ದರು. ಆದರೆ, 26 ಓವರ್​ ಬೌಲಿಂಗ್​ ಮಾಡಿ ಕೇವಲ ಒಂದು ವಿಕೆಟ್​ ಪಡೆದಿದ್ದರು.

ಇದೀಗ ಬುಧವಾರ ಐಸಿಸಿ ಬಿಡುಗಡೆ ಮಾಡಿದ ನೂತನ ಬೌಲಿಂಗ್​ ಶ್ರೇಯಾಂಕಲ್ಲಿ 5 ಸ್ಥಾನ ಕುಸಿತ ಕಂಡು 6ರಿಂದ 11ನೇ ಸ್ಥಾನ ಹಿಂಬಡ್ತಿ ಪಡೆದಿದ್ದಾರೆ. ಭಾರತದ ಪರ ಆರ್​ ಅಶ್ವಿನ್​ ಮಾತ್ರ ಟಾಪ್​ 10ರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಭಾರತದ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದ ಟಿಮ್​ ಸೌಥಿ 8 ಸ್ಥಾನ ಬಡ್ತಿ ಪಡೆದು 6 ಸ್ಥಾನಕ್ಕೇರಿದ್ದಾರೆ.

ಆಸ್ಟ್ರೇಲಿಯಾದ ಪ್ಯಾಟ್​ ಕಮ್ಮಿನ್ಸ್​ 904 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದರೆ, ನೀಲ್​ ವ್ಯಾಗ್ನರ್​(843) ಎರಡನೇ ಸ್ಥಾನದಲ್ಲೂ, ವಿಂಡೀಸ್​ನ ಜೇಸನ್​ ಹೋಲ್ಡರ್(830) 3, ದಕ್ಷಿಣ ಆಫ್ರಿಕಾದ ಕಗಿಸೊ ರಬಡಾ(802) 4, ಆಸ್ಟ್ರೇಲಿಯಾದ ಮಿಚೆಲ್​ ಸ್ಟಾರ್ಕ್​ 5ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ABOUT THE AUTHOR

...view details