ಮುಂಬೈ:ಭಾರತ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ನಾಯಕ ವಿರಾಟ್ ಕೊಹ್ಲಿಯನ್ನೇ ಮೀರಿಸಿ 2020ರಲ್ಲಿ ಅತಿ ಹೆಚ್ಚು ವೇತನ ಪಡೆದ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರೋಹಿತ್ ಶರ್ಮಾ 2020ರ ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲಿ ಎ+ ಶ್ರೇಣಿ ಪಡೆದಿದ್ದ ತಲಾ 7 ಕೋಟಿ ರೂ ಪಡೆಯಲಿದ್ದಾರೆ. ಆದರೆ, ಪಂದ್ಯದ ಶುಲ್ಕವಾಗಿ ಪಡೆಯುವ ಹಣದಲ್ಲಿ ಬುಮ್ರಾ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.
ಬುಮ್ರಾ 2020ರಲ್ಲಿ ಪಂದ್ಯದ ಶುಲ್ಕವಾಗಿ ಬಿಸಿಸಿಐನಿಂದ 1.38 ಕೋಟಿ ರೂಪಾಯಿ ಪಡೆಯಲಿದ್ದಾರೆ. ವೈಯಕ್ತಿಕ ಕಾರಣಗಳಿಂದ ಆಸ್ಟ್ರೇಲಿಯಾ ಪ್ರವಾಸವನ್ನು ಮೊಟಕುಗೊಳಿಸಿ ತವರಿಗೆ ಮರಳಿರುವ ನಾಯಕ ವಿರಾಟ್ ಕೊಹ್ಲಿ 1.29 ಕೋಟಿ ರೂ.ಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ ಎಂದು ಮಂಚೂಣಿ ಪತ್ರಿಕೆಯೊಂದು ವರದಿ ಮಾಡಿದೆ.