ಕರ್ನಾಟಕ

karnataka

ETV Bharat / sports

ಬುಮ್ರಾ ಓರ್ವ 'ಬೇಬಿ ಬೌಲರ್': ಡೆಡ್ಲಿ ಯಾರ್ಕರ್​ ಬಗ್ಗೆ ಪಾಕ್​ ಮಾಜಿ ಆಟಗಾರನ​​ ಹಗುರ ಮಾತು - ಬುಮ್ರಾ ಓರ್ವ ಬೇಬಿ ಬೌಲರ್

ವಿಶ್ವದ ನಂಬರ್​ 1 ಬೌಲರ್​ ಜಸ್​ಪ್ರೀತ್​ ಬುಮ್ರಾ ಕುರಿತು ಪಾಕಿಸ್ತಾನದ ಮಾಜಿ ಆಲ್​ರೌಂಡರ್​​ ಅಬ್ದುಲ್​ ರಜಾಕ್​ ಹಗುರವಾಗಿ ಮಾತನಾಡಿದ್ದಾರೆ.

Jasprit Bumrah
ಜಸ್​ಪ್ರೀತ್​ ಬುಮ್ರಾ

By

Published : Dec 4, 2019, 6:33 PM IST

ಹೈದರಾಬಾದ್​​:ಡೆಡ್ಲಿ ಯಾರ್ಕರ್​ಗಳ ಮೂಲಕ ಬ್ಯಾಟ್ಸ್​​ಮನ್​ಗಳ ಎದೆಯಲ್ಲಿ ನಡುಕ ಹುಟ್ಟಿಸುವ ವಿಶ್ವದ ನಂಬರ್​​​ ಒನ್​ ಬೌಲರ್​ ಜಸ್​ಪ್ರೀತ್​ ಬುಮ್ರಾ ಮೈದಾನಕ್ಕೆ ಕಾಲಿಟ್ಟರೆ ಎದುರಾಳಿ ತಂಡ ಸೋಲಿನ ಸುಳಿಗೆ ಸಿಲುಕಿಕೊಳ್ಳುವ ಭಯದಲ್ಲಿ ಮುಳುಗಿ ಹೋಗುತ್ತದೆ. ಆದರೆ ಇವರ ಬಗ್ಗೆ ಪಾಕಿಸ್ತಾನದ ಮಾಜಿ ಆಲ್​ರೌಂಡರ್​ ಹಗುರವಾಗಿ ಮಾತನಾಡಿದ್ದಾರೆ.

ಅಬ್ದುಲ್​ ರಜಾಕ್​​​

40 ವರ್ಷದ ಪಾಕಿಸ್ತಾನದ ಮಾಜಿ ಕ್ರಿಕೆಟರ್​ ಅಬ್ದುಲ್​ ರಜಾಕ್​​​​ ಕ್ರಿಕೆಟ್​ ಪಾಕಿಸ್ತಾನಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ತಾವು ವಿಶ್ವದ ನಂಬರ್​​ 1 ಬೌಲರ್​ಗಳಾಗಿದ್ದ ಗ್ಲೇನ್​ ಮೆಕ್​ಗ್ರಾಥ್​, ವಾಸೀಂ ಅಕ್ರಂ, ಶೋಯೆಬ್​ ಅಖ್ತರ್​ನಂತಹ ಬೌಲರ್​ಗಳನ್ನ ಸುಲಭವಾಗಿ ಎದುರಿಸಿದ್ದೇನೆ. ಇದೀಗ ಬುಮ್ರಾ ಒರ್ವ ಬೇಬಿ ಬೌಲರ್​​ ಅವರನ್ನ ಸುಲಭವಾಗಿ ಎದುರಿಸುವ ಸಾಮರ್ಥ್ಯ ನನ್ನ ಬಳಿ ಇದೆ ಎಂದು ಹೇಳಿದ್ದಾರೆ.

ಒಂದು ವೇಳೆ ನಾನು ಬ್ಯಾಟಿಂಗ್​ ಮಾಡಲು ಮೈದಾನಕ್ಕಿಳಿದಾಗ ಬುಮ್ರಾ ಬೌಲಿಂಗ್​ ಮಾಡಲು ಬಂದರೆ ಅವರು ಮೇಲೆ ಒತ್ತಡ ಇರುತ್ತದೆ ಎಂದು ತಿಳಿಸಿದ್ದಾರೆ. ಜತೆಗೆ ಸದ್ಯದ ವಿಶ್ವ ಕ್ರಿಕೆಟ್​​ನಲ್ಲಿ ಬುಮ್ರಾ ಓರ್ವ ಅದ್ಭುತ ಬೌಲರ್​ ಎಂಬುದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದಿರುವ ಪಾಕ್​​ ಮಾಜಿ ಪ್ಲೇಯರ್, ಅನೇಕ ಬೌಲರ್ಸ್​ ಉತ್ತಮವಾಗಿ ಬೌಲಿಂಗ್​ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ

ಇದೇ ವೇಳೆ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಬಗ್ಗೆ ಮಾತನಾಡಿರುವ ರಜಾಕ್​​, ಸಚಿನ್​ ತೆಂಡೂಲ್ಕರ್​ಗೆ ಕೊಹ್ಲಿ ಹೋಲಿಕೆ ಮಾಡುವುದು ಸರಿಯಲ್ಲ. 1992ರಿಂದ 2007ರ ನಡುವಿನ ಅವಧಿಯಲ್ಲಿ ಅದ್ಭುತ ಕ್ರಿಕೆಟ್​ ಬ್ಯಾಟ್ಸ್​ಮನ್​ಗಳಿದ್ದರು ಎಂದು ತಿಳಿಸಿದ್ದಾರೆ.

ABOUT THE AUTHOR

...view details