ಮುಂಬೈ: ಕೋವಿಡ್ -19 ವಿರುದ್ಧ ಹೋರಾಡುತ್ತಿರುವವರಿಗೆ ಬೆಂಬಲ ನೀಡುವ ಸಲುವಾಗಿ ದೇಶದ ಜನರೆಲ್ಲ ಒಂದಾಗಿರುವುದನ್ನು ಭಾರತ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಸ್ವಾಗತಿಸಿದ್ದಾರೆ.
'ನಾವೆಲ್ಲ ಮನೆಯಲ್ಲಿದ್ದರೂ ಕೂಡ ನಮಗೋಸ್ಕರ ನಿಸ್ವಾರ್ಥವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಅನೇಕರಿದ್ದಾರೆ. ನಮಗಾಗಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಮ್ಮ ಈ ಶಿಸ್ತು ಮತ್ತು ಬದ್ಧತೆ ಹೀಗೆ ಮುಂದುವರಿಯಬೇಕಾಗಿದೆ' ಎಂದು ಸಚಿನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ, ಇಡೀ ರಾಷ್ಟ್ರವು ವೈದ್ಯಕೀಯ ಮತ್ತು ಇತರ ಅಗತ್ಯ ಸೇವೆಗಳಲ್ಲಿ ನಿರತರಾದವರಿಗೆ ಭಾನುವಾರ ಸಂಜೆ 5 ಗಂಟೆಗೆ ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ ಮತ್ತು ಶಂಖ ಊದುವ ಮೂಲಕ ಮಾರಕ ಸೋಂಕಿನ ವಿರುದ್ಧ ಹೋರಾಡುತ್ತಿರುವವರನ್ನು ಹುರಿದುಂಬಿಸಲಾಯಿತು.
ಸ್ಟಾರ್ ಕುಸ್ತಿಪಟು ಭಜರಂಗ್ ಪುನಿಯಾ, ಭಾರತದ ಮಾಜಿ ಕ್ರಿಕೆಟಿಗ ಮತ್ತು ತರಬೇತುದಾರ ಅನಿಲ್ ಕುಂಬ್ಳೆ, ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಸೇರಿ ಹಲವು ಕ್ರೀಡಾಪಟುಗಳು ಮೋದಿ ಕರೆಗೆ ಕೈಜೋಡಿಸಿದ್ದರು.