ಸಿಡ್ನಿ: ಕ್ರಿಕೆಟ್ನಲ್ಲಿ ಚೆಂಡನ್ನು ದಂಡಿಸುವಾತ(ಬ್ಯಾಟ್ಸ್‌ಮನ್) ಕ್ಯಾಚ್, ಬೌಲ್ಡ್, ಸ್ಟಂಪ್ ಔಟ್ ಅಥವಾ ಎಲ್ಬಿಡಬ್ಲ್ಯೂ ಆಗಿ ಯೂ ಕ್ರೀಸ್‌ನಿಂದ ನಿರ್ಗಮಿಸಿ ಪೆವಿಲಿಯನ್ ಸೇರಬಹುದು. ಆದರೆ, ಸ್ಟ್ರೈಕರ್ನಲ್ಲಿರುವ ಬ್ಯಾಟ್ಸ್‌ಮನ್ ಹೊಡೆದ ಚೆಂಡಿನಿಂದ ನಾನ್ ಸ್ಟ್ರೈಕರ್ನಲ್ಲಿರುವ ಆಟಗಾರ ಔಟಾದ ಆಶ್ಚರ್ಯಕರ ಘಟನೆ ಬಿಗ್ಬ್ಯಾಷ್ ಲೀಗ್ನಲ್ಲಿ ನಡೆದಿದೆ.
ಹಾಲಿ ಚಾಂಪಿಯನ್ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧ ಬ್ಯಾಟಿಂಗ್ ನಡೆಸುವ ವೇಳೆ ಸ್ಟ್ರೈಕರ್ ಜೋಶ್ ಫಿಲೆಪ್ಪೆ ಹೊಡೆದ ಚೆಂಡು ನೇರವಾಗಿ ಬೌಲರ್ ವಿಲ್ ಸದರ್ಲೆಂಡ್ ಕೈಗೆ ಹೋಗಿತ್ತು. ಆದರೆ ಸದರ್ಲೆಂಡ್ ಕ್ಯಾಚ್ ಪಡೆಯುವಲ್ಲಿ ವಿಫಲರಾದರು. ಆದರೆ, ಅವರ ಕೈಯಿಂದ ತಪ್ಪಿದ ಚೆಂಡು ನೇರವಾಗಿ ಸ್ಟಂಪ್ಸ್‌ಗೆ ತಾಗಿದ್ದರಿಂದ ವಿಕೆಟ್ ನಾನ್ಸ್ಟ್ರೈಕರ್ನಲ್ಲಿದ್ದ ಇಂಗ್ಲೆಂಡ್ ತಂಡದ ಜೇಮ್ಸ್ ವಿನ್ಸ್ ರನ್ಔಟ್ ಆದರು!