ಕರ್ನಾಟಕ

karnataka

ETV Bharat / sports

ಭಾರತ ವಿರುದ್ಧದ ಮೂರನೇ ಟೆಸ್ಟ್​​​​​​ನಿಂದ ಹೊರಬಿದ್ದ ಜೇಮ್ಸ್ ಪ್ಯಾಟಿನ್ಸನ್ - ಭಾತರ vs ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಪಂದ್ಯ

ಭಾರತ ವಿರುದ್ಧದ ಟೆಸ್ಟ್ ಸರಣಿಯ ಆಸ್ಟ್ರೇಲಿಯಾದ ಟೆಸ್ಟ್ ತಂಡದ ಭಾಗವಾಗಿದ್ದ ಪ್ಯಾಟಿನ್ಸನ್​ ಮನೆಯಲ್ಲಿ ಬಿದ್ದು ಗಾಯಮಾಡಿಕೊಂಡ ಪರಿಣಾಮ ಮೂರನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.

James Pattinson
ಜೇಮ್ಸ್ ಪ್ಯಾಟಿನ್ಸನ್

By

Published : Jan 4, 2021, 9:51 AM IST

ಮೆಲ್ಬೋರ್ನ್:ಸೋಮವಾರದಿಂದ ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ಆಸ್ಟ್ರೇಲಿಯಾ ವೇಗಿ ಜೇಮ್ಸ್ ಪ್ಯಾಟಿನ್ಸನ್ ಹೊರಬಿದ್ದಿದ್ದಾರೆ.

ಪ್ಯಾಟಿನ್ಸನ್ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ನಂತರ ರಜೆಯಲ್ಲಿದ್ದರು. ರಜೆಯ ಸಮಯದಲ್ಲಿ, ಮನೆಯಲ್ಲಿ ಬಿದ್ದು ಪಕ್ಕೆಲುಬುಗಳಿಗೆ ಪೆಟ್ಟು ಮಾಡಿಕೊಂಡಿದ್ದು, ನೋವಿನಿಂದ ಬಳಲುತ್ತಿದ್ದಾರೆ.

ಪ್ಯಾಟಿನ್ಸನ್ ಭಾರತ ವಿರುದ್ಧದ ಟೆಸ್ಟ್ ಸರಣಿಯ ಆಸ್ಟ್ರೇಲಿಯಾದ ಟೆಸ್ಟ್ ತಂಡದ ಭಾಗವಾಗಿದ್ದರು. ಆದರೆ, ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ. ಆದರೂ ಸಿಡ್ನಿಯಲ್ಲಿ ಈ ವಾರ ನಡೆಯುವ ಟೆಸ್ಟ್ ಪಂದ್ಯವನ್ನು ಆಡುವ ಸಾಧ್ಯತೆಯಿಲ್ಲ, ಏಕೆಂದರೆ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹ್ಯಜಲ್‌ವುಡ್ ಉತ್ತಮ ಫಾರ್ಮ್​ನಲ್ಲಿದ್ದಾರೆ.

ಮೈಕೆಲ್ ನೇಸರ್ ಮತ್ತು ಸೀನ್ ಅಬಾಟ್ ಈಗಾಗಲೇ ಆಸ್ಟ್ರೇಲಿಯಾದ ತಂಡದಲ್ಲಿದ್ದಾರೆ ಪ್ಯಾಟಿನ್ಸನ್ ಬದಲಿಗೆ ಮತ್ತೊಬ್ಬ ಆಟಗಾರನನ್ನು ಆಯ್ಕೆಮಾಡುವ ಸಾಧ್ಯತೆ ಇಲ್ಲ. ಗಬ್ಬಾದಲ್ಲಿ ನಡೆಯುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮೊದಲು ಅವರ ಫಿಟ್ನೆಸ್ ಅನ್ನು ನಿರ್ಣಯಿಸಲಾಗುತ್ತದೆ.

ABOUT THE AUTHOR

...view details