ಮುಂಬೈ:ಸೌರವ್ ಗಂಗೂಲಿ ಅವರ ನಾಯಕತ್ವದ ವೇಳೆ ಯುವರಾಜ್ ಮತ್ತು ಮೊಹಮ್ಮದ್ ಕೈಫ್ ಅತ್ಯುತ್ತಮ ಫೀಲ್ಡರ್ಗಳಾಗಿದ್ದರು. ಪ್ರಸ್ತುತ ಟೀಂ ಇಂಡಿಯಾ ಆಲ್ರೌಂಡ್ ಆಟಗಾರ ರವೀಂದ್ರ ಜಡೇಜಾ ವಿಶ್ವ ಕ್ರಿಕೆಟ್ ಅತ್ಯುತ್ತಮ ಫೀಲ್ಡರ್ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
ಸ್ಟಾರ್ಸ್ಪೋರ್ಟ್ಸ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಗೌತಮ್ ಗಂಭೀರ್, ಜಡೇಜಾ ವಿಶ್ವ ಕ್ರಿಕೆಟ್‌ನಲ್ಲಿ ಉತ್ತಮ ಫೀಲ್ಡರ್ ಏಕೆ ಎಂದು ವಿವರಿಸಿದ್ದಾರೆ. 'ನನ್ನ ಪ್ರಕಾರ, ವಿಶ್ವ ಕ್ರಿಕೆಟ್‌ನಲ್ಲಿ ಜಡೇಜಾ ಅವರಿಗಿಂತ ಉತ್ತಮ ಫೀಲ್ಡರ್ ಇಲ್ಲ. ಬಹುಶಃ ಅವರು ಸ್ಲಿಪ್ ಮತ್ತು ಗಲ್ಲಿ ಪಾಯಿಂಟ್ನಲ್ಲಿ ಫೀಲ್ಡಿಂಗ್ ಮಾಡದೆ ಇರಬಹುದು ಆದರೆ ಚೆಂಡನ್ನು ವಿಕೆಟ್ನತ್ತ ಎಸೆಯುವಲ್ಲಿ ಅವರಿಗಿಂತ ಉತ್ತಮರು ಮತ್ತೊಬ್ಬರಿಲ್ಲ ಎಂದಿದ್ದಾರೆ.