ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯಾ ಟೆಸ್ಟ್​ ಅಲ್ಲದೆ, ಇಂಗ್ಲೆಂಡ್ ವಿರುದ್ಧದ 2 ಪಂದ್ಯಕ್ಕೂ ಜಡೇಜಾ ಅಲಭ್ಯ

ಜಡೇಜಾ ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಪಂದ್ಯವಲ್ಲದೆ ಫೆಬ್ರವರಿಯಲ್ಲಿ ಆರಂಭವಾಗಲಿರುವ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯ ಮೊದಲೆರಡು ಪಂದ್ಯಗಲಿಗೂ ಅಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.

ರವೀಂದ್ರ ಜಡೇಜಾ ಗಾಯ
ರವೀಂದ್ರ ಜಡೇಜಾ ಗಾಯ

By

Published : Jan 10, 2021, 11:02 PM IST

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್​​​ನ ಮೂರನೇ ದಿನ ಬ್ಯಾಟಿಂಗ್ ಮಾಡುವ ವೇಳೆ ಹೆಬ್ಬೆರೆಳು ಮುರಿತಕ್ಕೊಳಗಾಗಿರುವ ಭಾರತ ತಂಡದ ಆಲ್​ರೌಂಡರ್ ರವೀಂದ್ರ ಜಡೇಜಾ ಮುಂಬರುವ ಇಂಗ್ಲೆಡ್​ ಟೆಸ್ಟ್​​ ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಶನಿವಾರ ಬ್ಯಾಟಿಂಗ್​ ಮಾಡುತ್ತಿದ್ದ ವೇಳೆ ಮಿಚೆಲ್​ ಸ್ಟಾರ್ಕ್​ ಬೌಲಿಂಗ್​ನಲ್ಲಿ ಚೆಂಡು ಜಡೇಜಾ ಕೈಗೆ ಬಡಿದಿತ್ತು. ತಕ್ಷಣ ಚಿಕಿತ್ಸೆ ಪಡೆದ ಅವರು ಬ್ಯಾಟಿಂಗ್ ಮುಂದುವರಿಸಿ ಅಜೇಯ 28 ರನ್​ಗಳಿಸಿದ್ದರು. ನಂತರ ಸ್ಕ್ಯಾನಿಂಗ್​ ಒಳಗಾದ ಸಂದರ್ಭದಲ್ಲಿ ಹೆಬ್ಬರಳಿನ ಮೂಳೆ ಮುರಿದಿರುವುದು ಖಚಿತವಾಗಿದ್ದರಿಂದ ಅವರಿಗೆ ಕಡಿಮೆ ಎಂದರೂ 5-6 ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ಬಿಸಿಸಿಐ ತಿಳಿಸಿತ್ತು.

ಹಾಗಾಗಿ ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಪಂದ್ಯವಲ್ಲದೆ ಫೆಬ್ರವರಿಯಲ್ಲಿ ಆರಂಭವಾಗಲಿರುವ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯ ಮೊದಲೆರಡು ಪಂದ್ಯಗಲಿಗೂ ಅಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.

ಆದರೆ ನಾಳೆ ಭಾರತ ತಂಡ ಗೆಲ್ಲಲು 309ರನ್​ಗಳನ್ನು ಗಳಿಸಬೇಕಿದೆ. ಇದು ಅಸಾಧ್ಯವಾಗಿರುವುದರಿಂದ ಪಂದ್ಯವನ್ನು ಡ್ರಾ ಸಾಧಿಸುವುದಕ್ಕಾದರೂ ತಂಡದ ಎಲ್ಲಾ ಆಟಗಾರರಿಂದ 90 ಓವರ್​ ಪೂರ್ಣಗೊಳಿಸಬೇಕಿದೆ. ಒಂದು ವೇಳೆ ಎಲ್ಲಾ ಬ್ಯಾಟ್ಸ್​ಮನ್​ಗಳು ಔಟಾದರೆ ಸೋಲಿನಿಂದ ತಂಡವನ್ನು ಪಾರು ಮಾಡಲು ಜಡೇಜಾ ನೋವು ನಿವಾರಕ ಇಂಜೆಕ್ಷನ್​ ಪಡೆದು ಆಡುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಗಾಯದ ಕಾರಣ ಎರಡನೇ ಇನ್ನಿಂಗ್ಸ್​ನಲ್ಲಿ ರವೀಂದ್ರ ಜಡೇಜಾ ಬೌಲಿಂಗ್ ಮಾಡದ ಲಾಭವನ್ನು ಸಂಪೂರ್ಣವಾಗಿ ಬಳಿಸಿಕೊಂಡ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್​ನಲ್ಲಿ ಸುಲಭವಾಗಿ 312 ರನ್​ಗಳಿಸಿ ಡಿಕ್ಲೇರ್ ಘೋಷಿಸಿಜಕೊಂಡು 407 ರನ್​ಗಳಿಗೆ ಬೃಹತ್ ಟಾರ್ಗೆಟ್ ನೀಡಿತ್ತು.

ಭಾರತ ತಂಡ 4ನೇ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 98 ರನ್​ಗಳಿಸಿದೆ. ರೋಹಿತ್ 52 ಹಾಗೂ ಶುಬ್ಮನ್ ಗಿಲ್ 31 ರನ್​ಗಳಿಸಿ ಔಟಾದರೆ, ರಹಾನೆ 4 ಮತ್ತು ಪೂಜಾರ 9 ರನ್​ಗಳಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

ABOUT THE AUTHOR

...view details