ಸಿಡ್ನಿ :ಡಿಆರ್ಎಸ್ (ಡಿಸಿಸನ್ ರಿವ್ಯೂವ್ ಸಿಸ್ಟಮ್)ನಲ್ಲಿ ಅಂಪೈರ್ ಕರೆ ನಿರ್ಧಾರವನ್ನು ನಿಷೇಧಿಸುವಂತೆ ಐಸಿಸಿ ಎಲೈಟ್ ಪ್ಯಾನಲ್ನ ಮಾಜಿ ಅಂಪೈರ್ ಡೆರಿಲ್ ಹಾರ್ಪರ್ ಆಗ್ರಹಿಸಿದ್ದಾರೆ.
ಒಂದು ದಶಕವಾದರೂ ಡಿಆರ್ಎಸ್ನಲ್ಲಿ ಸಂವಹನ ಮತ್ತು ತಿಳುವಳಿಕೆಯಲ್ಲಿ ಕೊರತೆ ಕಂಡು ಬರುತ್ತಿರುವುದರಿಂದ ಮಿಚೆಲ್ ಈ ಹೇಳಿಕೆ ನೀಡಿದ್ದಾರೆ. ಪ್ರಸ್ತುತ ಅಂಪೈರ್ಗಳು ಎಲ್ಬಿಡಬ್ಲ್ಯೂಗೆ ರಿವ್ಯೂವ್ ಕೇಳಿದ ಸಂದರ್ಭದಲ್ಲಿ ಅಂಪೈರ್ ಕಾಲ್ ಪರಿಗಣನೆಗೆ ಬರುತ್ತದೆ.
ರಿವ್ಯೂನಲ್ಲಿ ಚೆಂಡು ಸ್ಟಂಪ್ಗೆ ಹೊಡೆಯುತ್ತಿದ್ದರೂ, ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ರೆ, ಟಿವಿ ಅಂಪೈರ್ಗೆ ಔಟ್ ಎಂದು ತೀರ್ಪು ನೀಡುವ ಅಥವಾ ಮೈದಾನದ ಅಂಪೈರ್ ನಿರ್ಧಾರವನ್ನು ಬದಲಿಸುವ ಅಧಿಕಾರ ಇರುವುದಿಲ್ಲ. ಈ ಸಂದರ್ಭದಲ್ಲಿ ಬೌಲಿಂಗ್ ತಂಡಕ್ಕೆ ಕೇವಲ ರಿವ್ಯೂ ಮಾತ್ರ ಉಳಿದುಕೊಳ್ಳಲಿದೆ.
ನಾನು ಸಾಕಷ್ಟು ಅಂಪೈರ್ ಕರೆಗಳನ್ನು ಹೊಂದಿದ್ದೇನೆ. ಹಾಗಾಗಿ ವಿವಾದವನ್ನು ತಡೆಯಲು ಅಂಪೈರ್ ಕರೆಯನ್ನು ನಿಷೇಧಿಸೋಣ. ಚೆಂಡು ಶೇ. 48 ಅಥವಾ 49 ಸ್ಟಂಪ್ಗೆ ತಾಕಿದರು ಅದನ್ನು ಔಟ್ ಎಂದೇ ತೀರ್ಮಾನಿಸೋಣ ಎಂದ ಆಸ್ಟ್ರೇಲಿಯಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.