ಕರ್ನಾಟಕ

karnataka

ETV Bharat / sports

ಧೋನಿ ಬಳಗದ ಸಿಎಸ್​ಕೆ ತಂಡಕ್ಕೆ ಬಲ ತುಂಬಲು ಇದು ಸುವರ್ಣಾವಕಾಶ ; ಇದು'ಗಂಭೀರ್' ಅಭಿಪ್ರಾಯ - ಆಸ್ಟ್ರೇಲಿಯಾದ ಆಲ್‌ರೌಂಡರ್ ವ್ಯಾಟ್ಸನ್

2020ರ ಐಪಿಎಲ್ ಆವೃತ್ತಿಯಲ್ಲಿ ಸರಾಸರಿ ಸಾಧನೆ ತೋರಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ವ್ಯಾಟ್ಸನ್ ಮತ್ತು ಬ್ರಾವೋ ಅವರ ಹೊರತಾಗಿಯೂ ಇಬ್ಬರು ಆಕ್ರಮನಕಾರಿ ಬ್ಯಾಟ್ಸಮನ್​ಗಳನ್ನು ಚೆನ್ನೈ ಸೂಪರ್​ ಕಿಂಗ್ ತಂಡ ಹುಡುಕುವುದು ಅನಿವಾರ್ಯವಾಗಿದೆ. ಬ್ರಾವೋ ಮೊದಲಿನಂತೆ ಲಯಕ್ಕೆ ಬರದಿದ್ದರೆ ಅವರ ಸ್ಥಾನವನ್ನು ತುಂಬುವವರಿಗೆ ಅವಕಾಶ ಮಾಡಿಕೊಡುವ ಮೂಲಕ ದೋನಿ ಬಳಗ ಬರುವ ಐಪಿಎಲ್ ಆವೃತ್ತಿಯಲ್ಲಿ ಮತ್ತೆ ಕಮಾಲ್​ ಮಾಡಲಿದೆ..

It's time for CSK to replace Watson in squad: Gambhir
ಚೆನ್ನೈ ಸೂಪರ್​ ಕಿಂಗ್

By

Published : Feb 16, 2021, 7:20 PM IST

Updated : Feb 16, 2021, 7:33 PM IST

ನವದೆಹಲಿ :ಮಹೇಂದ್ರ ಸಿಂಗ್​ ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ ಈ ಸಾರಿಯ ಐಪಿಎಲ್​ನಲ್ಲಿ ಕೆಲ ಬದಲಾವಣೆಯೊಂದಿಗೆ ಅಂಗಳಕ್ಕೆ ಇಳಿಯಬಹುದು ಎಂದು ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್​ ಗಂಭೀರ್​ ಅಭಿಪ್ರಾಯಪಟ್ಟಿದ್ದಾರೆ.

ವಯಸ್ಸಿನ ಕಾರಣದಿಂದ ಅನುಭವಿ ಆಟಗಾರರಾದ ಶೇನ್​ ವ್ಯಾಟ್ಸನ್ (ನಿವೃತ್ತಿ)​ ಮತ್ತು ಡ್ವೇನ್​ ಬ್ರಾವೋ ಅವರ ಬದಲಿಗೆ ಇಬ್ಬರು ಆಕ್ರಮಣಕಾರಿ ವಿದೇಶಿ ಆಟಗಾರರನ್ನು ಹುಡುಕಬೇಕಿದೆ ಎಂದಿದ್ದಾರೆ. ಹರಾಜಿಗೂ ಮುನ್ನ ತಂಡದ ಆಯ್ಕೆಯ ಬಗ್ಗೆ ಗೌತಮ್​ ಗಂಭೀರ್ ಇಂತಹದ್ದೊಂದು ಸಲಹೆ ನೀಡಿದ್ದಾರೆ.

ಗೌತಮ್​ ಗಂಭೀರ್

ಶೇನ್​ ವ್ಯಾಟ್ಸನ್ ಈಗಾಗಲೇ ಎಲ್ಲ ಮಾದರಿಯ ಆಟದಿಂದ ನಿವೃತ್ತಿ ತೆಗೆದುಕೊಂಡಿದ್ದಾರೆ. ಡ್ವೇನ್​ ಬ್ರಾವೋ ವಯಸ್ಸಿನ ಕಾರಣದಿಂದ ಮೊದಲಿನಂತೆ ಅಷ್ಟು ಆಕ್ರಮಣಕಾರಿ ಆಟ ತೋರ್ಪಡಿಸಲು ಸಾಧ್ಯವಾಗದೇ ಇರಬಹುದು.

ಹಾಗಾಗಿ, ಅವರ ಸ್ಥಾನವನ್ನು ತುಂಬಲು ಒಬ್ಬ ಆಲ್​ರೌಂಡರ್​ ಸಹಿತ ಇಬ್ಬರು ವಿದೇಶಿ ಆಟಗಾರರನ್ನು ಕ್ರೀಸ್​ಗೆ ಇಳಿಸಬಹುದು. ಹಿಗೇನಾದರೂ ಆದರೆ ಚೆನ್ನೈ ಸೂಪರ್​ ಕಿಂಗ್ಸ್ ತಂಡ ಮತ್ತಷ್ಟು ಬಲಪ್ರದರ್ಶನ ತೋರ್ಪಡಿಸಬಹುದು ಎಂದಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ ತಂಡ

ಇನ್ನು, ಕೊನೆಯ ಬಾರಿ ಕಾರಣಾಂತರಗಳಿಂದ ಆಲ್​ರೌಂಡರ್​ ಸುರೇಶ್​ ರೈನಾ ತಂಡದಿಂದ ಹೊರ ಗುಳಿದಿದ್ದರು. ಈ ಬಾರಿ ಮತ್ತೆ ಆಗಮಿಸಿದ್ದು ಈ ಪುನರಾಗಮನ ತಂಡಕ್ಕೆ ಉತ್ಸಾಹ ತಂದಿದೆ. ಕಳೆದ ಬಾರಿ ಹೀನಾಯ ಪ್ರದರ್ಶನ ತೋರಿದ್ದ ಚೆನ್ನೈ ಸೂಪರ್​ ಕಿಂಗ್ ಪ್ಲೇ-ಆಫ್​ ಅರ್ಹತೆಯಿಂದ ವಂಚಿತರಾಗಬೇಕಾಯಿತು. ಹಾಗಾಗಿ, ಈ ಬಾರಿ ಹೊಸಬರಿಗೆ ಅವಕಾಶ ಮಾಡಿಕೊಡುವ ಮೂಲಕ ಯಾವ ರೀತಿ ಕಮಾಲ್​ ಮಾಡಬಹುದು ಎಂಬುದನ್ನು ಕಾದು ನೋಡಬೇಕಿದೆ.

Last Updated : Feb 16, 2021, 7:33 PM IST

ABOUT THE AUTHOR

...view details