ಅಹ್ಮದಾಬಾದ್:ಸೀಮಿತ ಓವರ್ಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಅದ್ಭುತ ಪ್ರದರ್ಶನ ತೋರುತ್ತಿರುವ ಭಾರತದ ಸ್ಟಾರ್ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅಂತರ ಇಲ್ಲದೆ ವಿಶ್ವಕಪ್ ನಿರಂತರವಾಗಿ ನಡೆದರೆ, ಅದು ತನ್ನ ಮೋಡಿಯನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಪ್ರತಿ ಎರಡು ವರ್ಷಗಳಿಗೆ ಐಸಿಸಿ ಈ ಮೆಗಾ ಇವೆಂಟ್ ನಡೆಸಲು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
2016ರಲ್ಲಿ ಕೊನೆಯ ಬಾರಿ ಭಾರತ ಟಿ20 ವಿಶ್ವಕಪ್ ಆಯೋಜಿಸಿತ್ತು, ಇದೀಗ ಈ ವರ್ಷದ ನವೆಂಬರ್ನಲ್ಲಿ ಮತ್ತೆ ಭಾರತದಲ್ಲಿ ವಿಶ್ವಕಪ್ ನಡೆಯಲಿದೆ. ಟೀಮ್ ಇಂಡಿಯಾ ತವರಿನ ವಿಶ್ವಕಪ್ಗಾಗಿ ಉತ್ಸಾಹದಿಂದ ಎದುರು ನೋಡುತ್ತಿದೆ, ಆದರೆ ಈ ಮೆಗಾ ಇವೆಂಟ್ಗೂ ಮುನ್ನ ಸಾಕಷ್ಟು ಕೆಲಸದ ಅಗತ್ಯವಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.
ನೀವು ವಿಶ್ವಕಪ್ ಆಡದಿದ್ದರೆ, ಖಂಡಿತವಾಗಿ ಅದನ್ನು ಮಿಸ್ ಮಾಡಿಕೊಳ್ಳುತ್ತೀರಿ. ಆದರೆ ನಾವು 2019ರ ಏಕದಿನ ವಿಶ್ವಕಪ್ ಆಡಿದ್ದೇವೆ. ಹಾಗಾಗಿ ಐಸಿಸಿ ಹೆಚ್ಚು ವಿಶ್ವಕಪ್ಗಳನ್ನು ಆಯೋಜಿಸುವುದು ಬೇಡ ಎಂದು ನಿರ್ಧರಿಸಿತ್ತು. ಹಾಗಾಗಿ ಅವರು 2016-2021ರ ವರಗೆ ಟಿ20 ವಿಶ್ವಕಪ್ಗೆ ಅಂತರ ನೀಡಿದ್ದರು. ಆದರೆ ಈ ಮಧ್ಯೆ 50 ಓವರ್ಗಳ ವಿಶ್ವಕಪ್ ಆಯೋಜನೆ ಮಾಡಲಾಗಿತ್ತು.
ಹಾಗಾಗಿ, ಅಭಿಮಾನಿಗಳು ಕೂಡ ಈ ವಿಶ್ವಕಪ್ಗಾಗಿ ಎದುರು ನೋಡುತ್ತಿದ್ದಾರೆ. ಏಕೆಂದರೆ ಪ್ರತಿ ಎರಡು ವರ್ಷಗಳಿಂದ ಒಂದು ವಿಶ್ವಕಪ್ ನಡೆಯದಿದ್ದರೆ, ಅದು ತನ್ನ ಕಳೆಯನ್ನು ಕಳೆದುಕೊಳ್ಳಲಿದೆ. ಈ ವಿಶ್ವಕಪ್‌ನ ತಾಜಾತನದಿಂದ ಕೂಡಿದೆ, ಇದು ಭಾರತದಲ್ಲಿ ನಡೆಯುವುದರಿಂದ ಅತ್ಯಾಕರ್ಷಕ ವಿಶ್ವಕಪ್ ಆಗಲಿದೆ ಎಂದು ಶರ್ಮಾ ತಿಳಿಸಿದ್ದಾರೆ.
ಇದನ್ನು ಓದಿ: ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಪಂತ್, ರೋಹಿತ್ ಶ್ರೇಷ್ಠ ಸಾಧನೆ, ಅಶ್ವಿನ್ಗೆ 2ನೇ ಸ್ಥಾನ