ಕರ್ನಾಟಕ

karnataka

ETV Bharat / sports

ಕ್ರಿಕೆಟ್​ ಪ್ರಿಯರಿಗೆ ಗುಡ್​ ನ್ಯೂಸ್​: ಜುಲೈನಲ್ಲಿ ಲಂಕಾ ಪ್ರವಾಸಕ್ಕೆ ಬಿಸಿಸಿಐ ಅಸ್ತು... ಆದ್ರೆ?

ಶ್ರೀಲಂಕಾ ಪ್ರವಾಸ ಕೈಗೊಳ್ಳುವ ನಿರ್ಧಾರ ಕೇಂದ್ರ ಸರ್ಕಾರದ ಮೇಲಿದೆ. ಲಾಕ್​​ಡೌನ್​ನಲ್ಲಿ ಬಿಡುವು ಹಾಗೂ​ ವಿಮಾನ ಪ್ರಯಾಣದ ನಿರ್ಬಂಧಗಳಿಗೆ ಸಂಬಂಧಿಸಿದ ಸರ್ಕಾರದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ತಂಡ ಲಂಕಾಗೆ ತೆರಳಲು ಸಿದ್ಧವಿದೆ ಎಂದು ಧುಮಾಲ್​ ಮಾಹಿತಿ ನೀಡಿದ್ದಾರೆ.

ಶ್ರೀಲಂಕಾ- ಭಾರತ
ಬಿಸಿಸಿಐ

By

Published : May 16, 2020, 2:23 PM IST

ಮುಂಬೈ: ಪೂರ್ವನಿಗದಿಯಂತೆ ಶ್ರೀಲಂಕಾ ವಿರುದ್ಧ 3 ಏಕದಿನ ಹಾಗೂ 3 ಟಿ-20 ಪಂದ್ಯಗಳನ್ನಾಡಲು ಬಿಸಿಸಿಐ ಸಿದ್ಧವಿದೆ. ಆದರೆ ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದರೆ ಮಾತ್ರ ಸಾಧ್ಯ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್​ ಹೇಳಿದ್ದಾರೆ.

‘ಎಲ್ಲಾ ನಿರ್ಧಾರವು ಕೇಂದ್ರ ಸರ್ಕಾರದ ಮೇಲಿದೆ. ಲಾಕ್​​ಡೌನ್​ನಲ್ಲಿ ಬಿಡುವು ಹಾಗೂ​ ವಿಮಾನ ಪ್ರಯಾಣದ ನಿರ್ಬಂಧಗಳಿಗೆ ಸಂಬಂಧಿಸಿದ ಸರ್ಕಾರದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ತಂಡ ಲಂಕಾಗೆ ತೆರಳಲು ಸಿದ್ಧವಿದೆ’ ಎಂದು ಧುಮಾಲ್​ ಮಾಹಿತಿ ನೀಡಿದ್ದಾರೆ.

ಶುಕ್ರವಾರ ಶ್ರೀಲಂಕಾ ಕ್ರಿಕೆಟ್​ ಮಂಡಳಿ, ಭಾರತ ತಂಡ ಲಾಕ್​ಡೌನ್​ ನಿಯಮಗಳನ್ನು ಪಾಲಿಸುವುದಾದರೆ ನಾವು ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 3 ಟಿ-20 ಪಂದ್ಯಗಳನ್ನು ಆಯೋಜಿಸಲು ಸಿದ್ಧ ಎಂದು ಬಿಸಿಸಿಐಗೆ ಇ ಮೇಲ್​ ಮೂಲಕ ತಿಳಿಸಿತ್ತು.

ಮಾರ್ಚ್​ನಲ್ಲಿ ಕೊರೊನಾ ಭೀತಿಯಿಂದ ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿ ಹಾಗೂ ಇಂಗ್ಲೆಂಡ್​-ಶ್ರೀಲಂಕಾ ಟೆಸ್ಟ್ ಸರಣಿ ರದ್ದಾಗಿತ್ತು. ಇದೀಗ ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಭಾರತದ ಕ್ರಿಕೆಟ್​ ಅಭಿಮಾನಿಗಳಿಗೆ ಮತ್ತೆ ಕ್ರಿಕೆಟ್​ ವೀಕ್ಷಿಸುವ ಭಾಗ್ಯ ಸಿಗಲಿದೆ.​

ABOUT THE AUTHOR

...view details