ಸೌತಾಂಪ್ಟನ್: ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಟೂರ್ನಿಗೆ ತಂಡಕ್ಕೆ ವಾಪಸ್ ಆಗಿರುವ ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೊಯ್ನಿಸ್, ತಂಡಕ್ಕೆ ಮರಳುತ್ತಿರುವುದು ಉತ್ತಮವಾದ ಬಹುಮಾನ ಎಂದು ಹೇಳಿದ್ದಾರೆ.
ತಂಡಕ್ಕೆ ಮರಳುತ್ತಿರುವುದರ ಕುರಿತು ಮಾತನಾಡಿರುವ ಸ್ಟೊಯ್ನಿಸ್, ಸೃಜನಶೀಲತೆಗಳನ್ನು ತರುವ ಮೂಲಕ ಬ್ಯಾಟಿಂಗ್ನಲ್ಲಿ ಚಲನಶೀಲತೆಯನ್ನು ಬದಲಾಯಿಸಿಕೊಳ್ಳಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾದ ನಂತರ ಅವರಿಂದ ಈ ಹೇಳಿಕೆ ಬಂದಿದೆ.
ಟಿ 20 ಪಂದ್ಯಗಳು ಏಜಸ್ ಬೌಲ್‌ನಲ್ಲಿ ನಡೆಯಲಿದ್ದು, ಏಕದಿನ ಸರಣಿ ಎಮಿರೇಟ್ಸ್ ಓಲ್ಡ್ ಟ್ರ್ಯಾಫೋರ್ಡ್‌ನಲ್ಲಿ ನಡೆಯಲಿದೆ. ಈ ಎಲ್ಲಾ ಪಂದ್ಯಗಳನ್ನು ಮುಚ್ಚಿದ ಕ್ರೀಡಾಂಗಣದಲ್ಲಿ ಆಡಲಾಗುತ್ತದೆ.
ನಾನು ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ಕ್ರೀಸ್ನಲ್ಲಿ ಸ್ವಲ್ಪಮಟ್ಟಿಗೆ ಇರುವ ಸಲುವಾಗಿ ಕೆಲವು ಆಯ್ಕೆಗಳನ್ನು ರಚಿಸಲು ಮತ್ತು ಆಟದ ಕ್ರಿಯಾತ್ಮಕತೆಯನ್ನು ಬದಲಾಯಿಸಲು ಹೆಚ್ಚು ಸಿದ್ದನಾಗಿದ್ದೇನೆ. ನಾನು ಸಾಕಷ್ಟು ವೈಯಕ್ತಿಕ ರಚನಾತ್ಮಕ ಆಟಗಾರನಾಗಿದ್ದೇನೆ ಹಾಗಾಗಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ ಎಂದು ಸ್ಟೊಯ್ನಿಸ್ ಹೇಳಿದ್ದಾರೆ.
2019 ವಿಶ್ವಕಪ್ ನಂತರ ಆಸ್ಟ್ರೇಲಿಯಾ ತಂಡದಿಂದ ಹೊರಬಿದ್ದಿದ್ದರು. ಈ ಬಗ್ಗೆ ಮಾತನಾಡಿದ ಅವರು ನೀವು ಉತ್ತಮ ಪ್ರದರ್ಶನ ತೋರಿದರೂ ಮಂಡಳಿಯಿಂದ ಬಹುಮಾನ ಸಿಗುತ್ತಿಲ್ಲ ಅನಿಸಿದಾಗ ಅದು ನಿರಾಶಾದಾಯಕವಾಗಿರುತ್ತದೆ. ಆದರೆ ಅದೇ ರೀತಿ ಏರೇಳು ಆಟಗಾರರು ಇದ್ದಾಗ ನೀವು ಆ ಅಲೋಚನೆಯಲ್ಲಿ ತುಂಬಾ ದೂರ ಹೋಗದೆ, ನೀವು ನಿಮ್ಮ ಕೆಲಸವನ್ನು ಮಾಡುತ್ತಿದ್ದರೆ ತಂಡಕ್ಕೆ ಹಿಂತಿರುಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ತಂಡಕ್ಕೆ ಮರಳಲು ಎಷ್ಟು ಸಮಯ ಬೇಕು ಎಂದು ತಿಳಿದಿರಲಿಲ್ಲ. ಆದರೆ ಮರಳಿರುವುದು ಸಂತೋಷ ತಂದಿದೆ ಎಂದಿದ್ದಾರೆ.
ಸ್ಟೊಯ್ನಿಸ್ ಕಳೆದ ವರ್ಷದ ಬಿಗ್ಬ್ಯಾಶ್ನಲ್ಲಿ 54.23 ರ ಸರಾಸರಿಯಲ್ಲಿ ಒಂದು ಶತಕದ ಸಹಿತ 705 ರನ್ಗಳಿಸಿದ್ದರು. ಸಿಡ್ನಿ ಸಿಕ್ಸರ್ ವಿರುದ್ಧ ಔಟಾಗದೆ 147 ರನ್ಗಳಿಸಿ ದಾಖಲೆ ನಿರ್ಮಿಸಿದ್ದರು.
ಇದೀಗ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿರುವ 21 ಆಟಗಾರರ ಪಟ್ಟಿಯಲ್ಲಿ ಅವರು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.