ಮೆಲ್ಬೋರ್ನ್: ಭಾರತ ಆಸ್ಟ್ರೇಲಿಯಾ ನೆಲದಲ್ಲಿ ಕಳೆದ ವರ್ಷ ಟೆಸ್ಟ್ ಸರಣಿ ಗೆದ್ದಿರಬಹುದು. ಆದರೆ, ಪ್ರಸ್ತುತ ಆಸೀಸ್ ತಂಡ ಸೋಲಿಸುವುದು ಕೊಹ್ಲಿ ಬಳಗಕ್ಕೆ ಸುಲಭದ ಮಾತಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಕೊಹ್ಲಿ ಬಳಗ ಟೆಸ್ಟ್ ಸರಣಿ ಗೆಲ್ಲಬೇಕಿದ್ರೆ ಈತನೇ ಪ್ರಮುಖ ಶಕ್ತಿ ಅಂದರು ಗಂಗೂಲಿ.. - ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲುವು ಕಷ್ಟ
ಭಾರತ 2018ರಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಸೋಲನುಭವಿಸಿತ್ತು. ಆದರೆ, ಕೊಹ್ಲಿ ಬಳಗ ಮುಂದಿನ ವರ್ಷ ಅವರೆಡೂ ತಂಡಗಳ ವಿರುದ್ಧ ಸರಣಿ ಗೆಲ್ಲುವುದನ್ನು ನಿರೀಕ್ಷಿಸಿದ್ದೇನೆ ಎಂದು ಗಂಗೂಲಿ ತಿಳಿಸಿದ್ದಾರೆ.
"2018ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ತಂಡ ಚೊಚ್ಚಲ ಟೆಸ್ಟ್ ಸರಣಿ ಜಯಿಸಿರಬಹುದು. ಆದರೆ, ಆ ಸಂದರ್ಭದಲ್ಲಿದ್ದ ಆಸ್ಟ್ರೇಲಿಯಾ ತಂಡ ಅತ್ಯಂತ ಕಳಪೆ ಎಂಬುದು ಕೊಹ್ಲಿಗೆ ತಿಳಿದಿದೆ. ಈ ನಿಟ್ಟಿನಲ್ಲಿ ಭಾರತ ತಂಡ ಮುಂದಿನ ವರ್ಷ ಆಸೀಸ್ ಪ್ರವಾಸದಲ್ಲಿ ಟೆಸ್ಟ್ ಸರಣಿ ಗೆಲ್ಲಲು ತುಂಬಾ ಕಷ್ಟ ಪಡಬೇಕಿದೆ. ಎಲ್ಲಾ ವಿಭಾಗದಲ್ಲೂ ಅದ್ಭುತ ಪ್ರದರ್ಶನ ತೋರಬೇಕಿದೆ" ಎಂದು ಗಂಗೂಲಿ ಹೇಳಿದ್ದಾರೆ.
ಕಳೆದ ಪ್ರವಾಸದಲ್ಲಿ ಆಸ್ಟ್ರೇಲಿಯಾ ತಂಡ ಸೂಪರ್ ಸ್ಟಾರ್ಗಳಾದ ವಾರ್ನರ್, ಸ್ಮಿತ್ ಹಾಗೂ ಲಾಬುಶೇನ್ರಿಲ್ಲದ ಆಸೀಸ್ ತಂಡವನ್ನು ಸುಲಭವಾಗಿ ಮಣಿಸಿತ್ತು. ಆದರೆ, ಈಗಿರುವ ಆಸ್ಟ್ರೇಲಿಯಾ ತಂಡ ಬಲಿಷ್ಠವಾಗಿರುವುದರಿಂದ ಕೊಹ್ಲಿ ಬಳಗಕ್ಕೆ ಜಯ ಕಠಿಣವಾಗಲಿದೆ. ಆದರೆ, ಭಾರತ ತಂಡ ಕೂಡ ಕೊಹ್ಲಿ ಸೇರಿ ಉತ್ತಮ ಬ್ಯಾಟ್ಸ್ಮನ್ಗಳನ್ನು ಅತ್ಯುತ್ತಮ ವೇಗದ ಬೌಲರ್ಸ್ ಹಾಗೂ ಅನುಭವಿ ಸ್ಪಿನ್ನರ್ಗಳನ್ನು ಹೊಂದಿದೆ. ಇದರ ಜೊತೆಗೆ ಇತ್ತೀಚೆಗೆ ಟೆಸ್ಟ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಅದ್ಭುತ ಪ್ರದರ್ಶನ ತೋರುತ್ತಿರುವ ರೋಹಿತ್ ಶರ್ಮಾ ಪ್ರದರ್ಶನ ಕೂಡ ಆಸೀಸ್ನಲ್ಲಿ ಟೆಸ್ಟ್ ಸರಣಿ ಗೆಲ್ಲಲು ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದ್ದಾರೆ.