ಕರ್ನಾಟಕ

karnataka

ETV Bharat / sports

ನನ್ನನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಹೇಳಿದ್ದು ಸಚಿನ್​, ಚಾಪೆಲ್​ ಅಲ್ಲ: ಇರ್ಫಾನ್ ಪಠಾಣ್​​ - Sachin Tendulkar advised Dravid to send patan at No.3

ಪಠಾಣ್​ರನ್ನು 3ನೇ ಕ್ರಮಾಂದಲ್ಲಿ ಬ್ಯಾಟಿಂಗ್​ಗೆ ಕಳುಹಿಸಿ ಪ್ರಯೋಗ ಮಾಡಬೇಕೆಂದು ನಿರ್ಧರಿಸಲಾಗಿತ್ತು. ಆಂದು ಭಾರತ ತಂಡದ ಕೋಚ್​ ಆಗಿದ್ದವರು ಆಸ್ಟ್ರೇಲಿಯಾದ ಗ್ರೇಗ್​ ಚಾಪೆಲ್​ ಹಾಗೂ ನಾಯಕ ದ್ರಾವಿಡ್​ ಆಗಿದ್ದರು. ಆದರೆ 3ನೇ ಕ್ರಮಾಂದಲ್ಲಿ ಪ್ರಯೋಗ ಮಾಡುವ ಉಪಾಯ ಸಚಿನ್​ ತೆಂಡೂಲ್ಕರ್​ ಅವರದ್ದಾಗಿತ್ತು.

ಇರ್ಫಾನ್ ಪಠಾಣ್​​
ಇರ್ಫಾನ್ ಪಠಾಣ್​​

By

Published : Jul 1, 2020, 6:09 PM IST

ನವದೆಹಲಿ: ಕಪಿಲ್​ ದೇವ್​ ನಂತರ ಭಾರತ ಕಂಡ ಶ್ರೇಷ್ಠ​ ಆಲ್​ರೌಂಡರ್​ ಆಗಿರುವ ಇರ್ಫಾನ್​ 7,8ನೇ ಕ್ರಮಾಂದಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದ ತಮ್ಮನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಲು ಸೂಚಿಸಿದ್ದು ಬ್ಯಾಟಿಂಗ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಎಂದು ಸ್ವತಹ ಪಠಾಣ್​ ತಿಳಿಸಿದ್ದಾರೆ.

ಪಠಾಣ್​ರನ್ನು 3ನೇ ಕ್ರಮಾಂದಲ್ಲಿ ಬ್ಯಾಟಿಂಗ್​ಗೆ ಕಳುಹಿಸಿ ಪ್ರಯೋಗ ಮಾಡಬೇಕೆಂದು ನಿರ್ಧರಿಸಲಾಗಿತ್ತು. ಆಂದು ಭಾರತ ತಂಡದ ಕೋಚ್​ ಆಗಿದ್ದವರು ಆಸ್ಟ್ರೇಲಿಯಾದ ಗ್ರೇಗ್​ ಚಾಪೆಲ್​ ಹಾಗೂ ನಾಯಕ ದ್ರಾವಿಡ್​ ಆಗಿದ್ದರು. ಆದರೆ 3ನೇ ಕ್ರಮಾಂದಲ್ಲಿ ಪ್ರಯೋಗ ಮಾಡುವ ಉಪಾಯ ಸಚಿನ್​ ತೆಂಡೂಲ್ಕರ್​ ಅವರದ್ದಾಗಿತ್ತು.

ನನ್ನಲ್ಲಿದ್ದ ದೊಡ್ಡ ಹೊಡೆತ ಹೊಡೆಯುವ ಕೌಶಲ್ಯವನ್ನು ಪರಿಗಣಿಸಿ ಸಚಿನ್​ ತೆಂಡೂಲ್ಕರ್​ ನಾಯಕ ದ್ರಾವಿಡ್ ಪಠಾಣ್​ರನ್ನು 3ನೇ ಕ್ರಮಾಂದಲ್ಲಿ ಬ್ಯಾಟಿಂಗ್​ ಕಳುಹಿಸಲು ಸಹೆ ನೀಡಿದ್ದರು. 2005 ರಿಂದ 2008ರವರೆಗೆ ಪಠಾಣ್​18 ಬಾರಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿದ್ದರು. ಅವರು ಮೂರು ಅರ್ಧಶತಕ ಸಹಿತ 487 ರನ್​ಗಳಿಸಿದ್ದಾರೆ.

" ನಾನು ನಿವೃತ್ತಿ ಘೋಷಿಸಿದ ದಿನಗಳಲ್ಲಿ ಈ ಬಗ್ಗೆ ಹೇಳಿದ್ದೇನೆ. ನನ್ನನ್ನು 3ನೇ ಕ್ರಮಾಂದಲ್ಲಿ ಬ್ಯಾಟಿಂಗ್​ ಕಳುಹಿಸು ನನ್ನ ವೃತ್ತಿ ಜೀವನ ಅಂತ್ಯವಾಗುವಂತೆ ಮಾಡಿದ್ದು ಎನ್ನಲಾಗುತ್ತಿದೆ. ಆದರೆ ನನ್ನನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಕಳುಹಿಸುವಂತೆ ಉಪಾಯ ಸಚಿನ್ ತೆಂಡೂಲ್ಕರ್ ಅವರದ್ದಾಗಿತ್ತು. ಅವರೇ ದ್ರಾವಿಡ್​ಗೆ ನನ್ನಲ್ಲಿರುವ ದೊಡ್ಡ ಹೊಡೆತ ಬಾರಿಸುವ ಗುಣವನ್ನು ಗಮನದಲ್ಲಿಟ್ಟುಕೊಂಡು ಸಚಿನ್​ ಪಾಜಿ ಆ ಆಲೋಚನೆ ಮಾಡಿದ್ದರು ಎಂದು ಪಠಾಣ್​ ತಿಳಿಸಿದ್ದಾರೆ.

ಆದರೆ ನನ್ನ ವೃತ್ತಿ ಜೀವನ ಹಾಳಾಗಲು ಚಾಪೆಲ್​ ಕಾರಣ ಎಂಬ ಸುದ್ದಿ ನಿಜವಲ್ಲ. ಅವರು ಭಾರತದವರಲ್ಲದ ಕಾರಣ ಅವರ ಮೇಲೆ ಪಂಚಿಂಗ್​ ಬ್ಯಾಗ್​ ಮಾಡುವು ಸುಲಭ ಎಂದು ಪಠಾಣ್​ ಯೂಟ್ಯೂಬ್​ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಪಠಾಣ್​ ಕೊನೆಯ ಭಾರಿ ಭಾರತದ ಪರ ಆಡಿದ್ದು 8 ವರ್ಷಗಳ ಹಿಂದೆ, ಅಂದರೆ ಅವರಿಗೆ ಆಗ 28 ವರ್ಷ ವಯಸ್ಸಾಗಿತ್ತು. ಅವಕಾಶ ಸಿಗದೇ ಬೇಸರದಿಂದ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾಗಿದ್ದರು.

ABOUT THE AUTHOR

...view details