ಕರ್ನಾಟಕ

karnataka

ETV Bharat / sports

'ಬಯೋ ಬಬಲ್ ಮಾನಸಿಕವಾಗಿ ಕಠಿಣವಾಗಿತ್ತು': ಆಟಗಾರರಿಗೆ ಧನ್ಯವಾದ ಅರ್ಪಿಸಿದ ದಾದಾ - IPL 2020

ಕೋವಿಡ್​ 19 ನಿಂದಾಗಿ 13ನೇ ಆವೃತ್ತಿಯ ಐಪಿಎಲ್ ಯುಎಇಯಲ್ಲಿ ನಡೆದಿತ್ತು. ​ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್​ಗಳ ಜಯ ಸಾಧಿಸಿತು.

ಸೌರವ್​ ಗಂಗೂಲಿ
ಸೌರವ್​ ಗಂಗೂಲಿ

By

Published : Nov 11, 2020, 5:32 PM IST

ದುಬೈ:ಮಂಗಳವಾರ 13ನೇ ಆವೃತ್ತಿ ಐಪಿಎಲ್ ಮುಕ್ತಾಯವಾಗಿದೆ. ಮುಂಬೈ ಇಂಡಿಯನ್ಸ್​ 5ನೇ ಬಾರಿ ಚಾಂಪಿಯನ್​ ಪಟ್ಟಕ್ಕೇರಿದೆ. ಆದರೆ, ಕೋವಿಡ್ ಸಂಕಷ್ಟದ ನಡುವೆಯೂ 3 ತಿಂಗಳ ಕಾಲ ಬಯೋಬಲ್​ನಲ್ಲಿದ್ದು ಟೂರ್ನಿಯ ಯಶಸ್ಸಿಗೆ ಕಾರಣರಾದ ಎಲ್ಲ ಆಟಗಾರರಿಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಧನ್ಯವಾದ ಅರ್ಪಿಸಿದ್ದಾರೆ.

ಕೋವಿಡ್​ 19 ನಿಂದಾಗಿ 13ನೇ ಆವೃತ್ತಿಯ ಐಪಿಎಲ್ ಯುಎಇಯಲ್ಲಿ ನಡೆದಿತ್ತು. ​ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್​ಗಳ ಜಯ ಸಾಧಿಸಿತು.

ಬಯೋ ಬಬಲ್​ನಲ್ಲಿದ್ದು ಟೂರ್ನಿಯನ್ನು ಯಶಸ್ವಿಯಾಗಿಸಲು ನೆರವಾದ ಎಲ್ಲ ಐಪಿಎಲ್​ ತಂಡಗಳ ಆಟಗಾರರಿಗೆ ಬಿಸಿಸಿಐ ಮತ್ತು ಎಲ್ಲ ಅಧಿಕಾರಿಗಳ ಪರವಾಗಿ ಮತ್ತು ವೈಯಕ್ತಿಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಬಯೋಬಬಲ್​ ನಿಜಕ್ಕು ಮಾನಸಿಕವಾಗಿ ಕಠಿಣವಾಗಿದೆ. ಭಾರತೀಯ ಕ್ರಿಕೆಟ್​ ಏನು ಎಂದು ತೋರಿಸಿಕೊಟ್ಟಿದ್ದೀರಾ ಎಂದು ಗಂಗೂಲಿ ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ಈ ಟೂರ್ನಿ ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಬೇಕಿತ್ತು. ಆದರೆ, ಭಾರತದಲ್ಲಿ ಕೊರೊನಾ ಭೀತಿಯಿಂದ ಮುಂದೂಡಲ್ಪಟ್ಟಿತ್ತು. ಕೆಲವು ತಿಂಗಳ ನಂತರ ಬಿಸಿಸಿಐ ಯುಎಇ ಕ್ರಿಕೆಟ್ ಸಹಯೋಗದಲ್ಲಿ ನಡೆಸಲು ತೀರ್ಮಾನಿಸಿತ್ತು.

ABOUT THE AUTHOR

...view details