ಕರ್ನಾಟಕ

karnataka

ವಿಧ್ವಂಸಕ ಬ್ಯಾಟ್ಸ್​ಮನ್​ ಗೇಲ್​ ಆರ್​ಸಿಬಿ ವಿರುದ್ಧ ಕಣಕ್ಕಿಳಿಯಲಿದ್ದಾರಾ?:  ರಾಹುಲ್​ ಏನಂದ್ರು?

By

Published : Sep 24, 2020, 6:38 PM IST

ಯೂನಿವರ್ಸಲ್ ಖ್ಯಾತಿಯ ಕ್ರಿಸ್​ ಗೇಲ್ ಟಿ-20 ಕ್ರಿಕೆಟ್​ ಇತಿಹಾಸದಲ್ಲಿ 404 ಪಂದ್ಯಗಳನ್ನಾಡಿದ್ದು, 146.94 ರ ಸ್ಟ್ರೈಕ್​ರೇಟ್​ನಲ್ಲಿ 13,296 ರನ್​ ಸಿಡಿಸಿದ್ದಾರೆ. ಅವರು 22 ಶತಕ ಹಾಗೂ 82 ಅರ್ಧಶತಕ ಬಾರಿಸಿದ್ದಾರೆ.

ಕ್ರಿಸ್​ ಗೇಲ್​
ಕ್ರಿಸ್​ ಗೇಲ್​

ದುಬೈ: ರಾಯಲ್​ ಚಾಂಲೆಂಜರ್ಸ್​ ಬೆಂಗಳೂರು ತಂಡದಲ್ಲಿ 2011ರಿಂದ 2013 ರವರೆಗೆ ರಾರಾಜಿಸಿದ್ದ ವಿಂಡೀಸ್ ದೈತ್ಯ ಬ್ಯಾಟ್ಸ್​ಮನ್​ ಕ್ರಿಸ್​ ಗೇಲ್​ ಕಳೆದ 2 ವರ್ಷಗಳಿಂದ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದಲ್ಲಿ ಆಡುತ್ತಿದ್ದಾರೆ. ಗುರುವಾರ ಪಂಜಾಬ್​ ತಂಡ ಆರ್​ಸಿಬಿ ಎದುರಿಸಲಿದ್ದು, ಈ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಪಂದ್ಯಕ್ಕೂ ಮೊದಲು ಮಾತನಾಡಿರುವ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್​, " ಕ್ರಿಸ್​ ಗೇಲ್ ಟಿ-20 ಕ್ರಿಕೆಟ್​ನ ಸ್ಫೋಟಕ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿದ್ದಾರೆ. ಅವರನ್ನು ಮೊದಲ ಪಂದ್ಯದಿಂದ ಕೈಬಿಡಬೇಕೆಂಬ ನಿರ್ಧಾರ ನಿಜಕ್ಕೂ ಅತ್ಯಂತ ಕಠಿಣವಾಗಿತ್ತು. ಆದರೆ, ಅವರು ಆದಷ್ಟು ಶೀಘ್ರದಲ್ಲೇ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡಕ್ಕೆ ಮರಳಲಿದ್ದಾರೆ" ಎಂದು ಹೇಳಿದ್ದಾರೆ.

ಆದರೆ, ರಾಹುಲ್​ ಇಂದು ನಡೆಯುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗೇಲ್ ಆಡಲಿದ್ದಾರಾ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಆದರೆ ಕೋಟ್ಯಂತರ ಅಭಿಮಾನಿಗಳು ಮಾತ್ರ ಸಿಕ್ಸರ್​ ಸರದಾರನ ಆಟವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ಯೂನಿವರ್ಸಲ್ ಖ್ಯಾತಿಯ ಕ್ರಿಸ್​ ಗೇಲ್ ಟಿ-20 ಕ್ರಿಕೆಟ್​ ಇತಿಹಾಸದಲ್ಲಿ 404 ಪಂದ್ಯಗಳನ್ನಾಡಿದ್ದು, 146.94 ರ ಸ್ಟ್ರೈಕ್​ರೇಟ್​ನಲ್ಲಿ 13,296 ರನ್​ ಸಿಡಿಸಿದ್ದಾರೆ. ಅವರು 22 ಶತಕ ಹಾಗೂ 82 ಅರ್ಧಶತಕ ಬಾರಿಸಿದ್ದಾರೆ.

ಇನ್ನು ಐಪಿಎಲ್​ನಲ್ಲಿ 125 ಪಂದ್ಯಗಳನ್ನಾಡಿರುವ ಕ್ರಿಸ್​ಗೇಲ್​ 6 ಶತಕಗಳ ಸಹಿತ 4,484 ರನ್​ ರನ್​ ಸಿಡಿಸಿದ್ದಾರೆ. ಅವರು ಗರಿಷ್ಠ ಸ್ಕೋರ್​ 175 ಆಗಿದೆ.

ABOUT THE AUTHOR

...view details