ನವದೆಹಲಿ:ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ವಿದಾಯ ಘೋಷಿಸಿದ್ದಾರೆ. ಸ್ವಾತಂತ್ರ್ಯೋತ್ಸವ ದಿನವೇ ಈ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಧೋನಿ ಸದ್ಯ ಐಪಿಎಲ್ ಟೂರ್ನಿಯಲ್ಲಿ ಭಾಗಿಯಾಗುವ ಉದ್ದೇಶದಿಂದ ಚೆನ್ನೈನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.
ಮಾಹಿ, ಇನ್ಮುಂದೆ ವಿಶ್ವ ಕ್ರಿಕೆಟ್ ನಿಮ್ಮ ಹೆಲಿಕಾಪ್ಟರ್ ಶಾಟ್ ಮಿಸ್ ಮಾಡಿಕೊಳ್ಳಲಿದೆ: ಅಮಿತ್ ಶಾ
ಅವರು ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ ಅನೇಕರು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದು, ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಅವರಿಗೆ ವಿಶ್ ಮಾಡಿದ್ದಾರೆ.
ಧೋನಿ ನಾಯಕತ್ವದ ಗುಣ ಪುನರಾವರ್ತನೆ ಮಾಡುವುದು ಕಷ್ಟ ಎಂದಿರುವ ಗಂಗೂಲಿ, ಒಂದು ಯುಗದ ಅಂತ್ಯ ಎಂದಿದ್ದಾರೆ. ಮಹೇಂದ್ರ ಸಿಂಗ್ ಧೋನಿ ದೇಶ ಮತ್ತು ವಿಶ್ವ ಕ್ರಿಕೆಟ್ನಲ್ಲಿ ವಿಶಿಷ್ಟ ಆಟಗಾರ. ಸೀಮಿತ್ ಓವರ್ಗಳ ಕ್ರಿಕೆಟ್ನಲ್ಲಿ ಅವರ ಸಾಧನೆ ಅಪಾರ. ಭರ್ಜರಿ ಬ್ಯಾಟಿಂಗ್ ಮೂಲಕ ವಿಶ್ವದ ಗಮನ ಸೆಳೆದಿರುವ ಅವರು, ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ ಎಂದಿದ್ದಾರೆ. ಪ್ರತಿಯೊಂದು ಒಳ್ಳೆಯದಕ್ಕೂ ಅಂತ್ಯವಿರುತ್ತದೆ. ದೇಶದ ವಿಕೆಟ್ ಕೀಪರ್ಗಳಿಗೆ ಮಾನದಂಡ ನಿಗದಿಪಡಿಸಿರುವ ಧೋನಿ, ವೃತ್ತಿಜೀವನ ಕೊನೆಗೊಳಿಸಿದ್ದಾರೆ. ಅವರ ಮುಂದಿನ ಜೀವನ ಉತ್ತಮವಾಗಿರಲಿ ಎಂದು ಹಾರೈಸಿದ್ದಾರೆ.