ಕರ್ನಾಟಕ

karnataka

ETV Bharat / sports

ಐಪಿಎಲ್‌ ಕ್ಲಿಕ್ ಆಗದಿದ್ರೇನಾಯ್ತು.. ಕೊಹ್ಲಿ ಕುಗ್ಗಿಲ್ಲ, ವಿಶ್ವಕಪ್​ಗೆ ಬೌನ್ಸ್​ಬ್ಯಾಕ್! - etv bharat

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸತತ ಸೋಲಿನ ಪರಿಣಾಮ ನಾಯಕ ವಿರಾಟ್ ಕೊಹ್ಲಿ ಫ್ಯಾನ್ಸ್​ಗಳಿಂದ ಸಾಕಷ್ಟು ಟೀಕೆಗೊಳಗಾಗಿದ್ದಾರೆ. ಹಾಗಂತ ಈ ಟೂರ್ನಿ ಫೇಲಾದ ಕೂಡಲೇ ಅದೇ ರೀತಿ ವರ್ಲ್ಡ್‌ಕಪ್‌ನಲ್ಲೂ ಫೇಲಾಗ್ತಾರೆ ಅಂತಾ ಊಹಿಸೋದು ತಪ್ಪು ಅಂತಾರೆ ಅದೇ ಫ್ಯಾನ್ಸ್​.

ನಾಯಕ ವಿರಾಟ್ ಕೊಹ್ಲಿ

By

Published : Apr 10, 2019, 5:25 PM IST

ಬೆಂಗಳೂರು: ನಿಜ ಅಭಿಮಾನಿಗಳು ಟೀಕೆ ಮಾಡೋದರಲ್ಲಿ ಹುರುಳಿದೆ. IPLನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಒಂದಲ್ಲ, ಆಡಿದ ಬರೋಬ್ಬರಿ ಆರು ಪಂದ್ಯ ಸೋತು ಸುಣ್ಣವಾಗಿದೆ. ಗೆದ್ದಾಗ ಆಟಗಾರರನ್ನ ಹೊತ್ತು ಮೆರೆಸಿದ ಫ್ಯಾನ್ಸ್‌ಗೆ ಸೋತಾಗ ಟೀಕಿಸುವ ಹಕ್ಕಿದೆ. ಆದರೆ, IPL ವೈಫಲ್ಯದಿಂದ ಮಾತ್ರ ವಿರಾಟ್ ಕೊಹ್ಲಿ ಅಳಿಯೋಕಾಗುತ್ತಾ, ಅದು ಸರಿಯಾ ಅನ್ನೋದೇ ಈಗಿರುವ ಪ್ರಶ್ನೆ.

ತಂಡ ಗೆಲ್ಲಿಸಲಿಲ್ಲ, ಬ್ಯಾಟ್‌ನಿಂದಲೂ ಕಮಾಲ್ ಮಾಡಿಲ್ಲ:

ಬ್ಲ್ಯೂ ಬಾಯ್ಸ್‌ ಕ್ಯಾಪ್ಟನ್ ವಿರಾಟ್ ಕೊಹ್ಲಿ

ಐಪಿಎಲ್‌ ವೈಫಲ್ಯದಿಂದ ವಿರಾಟ್‌ ಕೊಹ್ಲಿ ಮತ್ತು ಆರ್‌ಸಿಬಿ ತಂಡವನ್ನ ಕ್ರಿಕೆಟ್‌ ಫ್ಯಾನ್ಸ್‌ ಮರೆತೇಬಿಟ್ರಾ. ಈ ಪ್ರಶ್ನೆ ಏಳದೇ ಇರಲ್ಲ. ಅಲ್ರೀ ಆಡಿದ ಆರೂ ಪಂದ್ಯ ಸೋತರೆ ಇನ್ನೇನಾಗುತ್ತೆ. ಅದರಲ್ಲೂ ಈ ಐಪಿಎಲ್‌ ಟೂರ್ನಿಯಲ್ಲಿ ಕೊಹ್ಲಿ ಬ್ಯಾಟ್‌ನಿಂದಲೂ ಹೆಚ್ಚು ರನ್‌ಗಳು ಸಿಡಿದಿಲ್ಲ. ಈಗಾಗಲೇ ಅಂಕಪಟ್ಟಿಯಲ್ಲಿ ಉಳಿದ ಏಳೂ ತಂಡಕ್ಕಿಂತ ಕೆಳಗಿರುವ ಆರ್‌ಸಿಬಿ ಆದಷ್ಟೂ ಬೇಗ ಪ್ಲೇ-ಆಫ್‌ ರೇಸ್‌ನಿಂದ ಹೊರ ಹೋಗುವುದರಲ್ಲಿ ಡೌಟೇ ಇಲ್ಲ.

ಬ್ಲ್ಯೂ ಜರ್ಸಿ ಮೈಮೇಲಿದ್ರೇ ಕೊಹ್ಲಿ ಖದರ್‌ ಚೇಂಜಾಗುತ್ತೆ :

2 ತಿಂಗಳ ಬಳಿಕ ವರ್ಲ್ಡ್‌ಕಪ್‌ ಇದೆ. ವಿರಾಟ್‌ ಟೀಂ ಇಂಡಿಯಾ ಲೀಡ್ ಮಾಡ್ತಾರೆ. ಸಹಜವಾಗಿಯೇ ಈಗ ಆತಂಕವಿದೆ. ಯಾಕಂದ್ರೇ,ಬ್ಯಾಟಿಂಗ್‌ನಲ್ಲಿ ಮಿಸ್ಟರ್‌ ಡಿಪಂಡೆಬಲ್. ಅತೀ ಹೆಚ್ಚು ಕಾಲ ಕ್ರೀಸ್‌ನಲ್ಲಿದ್ರೇ ರನ್‌ಗಳ ಹೊಳೆ ಹರಿಯುತ್ತೆ. ಆದರೆ, ಪ್ರಶ್ನೆ ಇರೋದೇ ಕೊಹ್ಲಿ ತಮ್ಮ ಬ್ಯಾಟಿಂಗ್‌ನ ಫಾರ್ಮ್‌ ಉಳಿಸಿಕೊಳ್ತಾರಾ ಅನ್ನೋದು. ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ನಸೀಬು ಕೈಕೊಟ್ಟಿದೆ. ಆದರೆ, ಅದು ವರ್ಲ್ಡ್‌ಕಪ್‌ ಮೇಲೂ ಪರಿಣಾಮ ಬೀರುತ್ತೆ ಅಂತಾ ಹೇಳೋಕಾಗಲ್ಲ.

ನನ್ನಿಂದ ಸಾಧ್ಯ ಅಂತಾ ವಿರಾಟ್ ಕೊಹ್ಲಿ

ಐಪಿಎಲ್‌-ವರ್ಲ್ಡ್‌ ಕಪ್‌ ಕಂಪ್ಲೀಟ್‌ ಚೇಂಜಾಗಿರುತ್ತೆ :

ಕೊಹ್ಲಿ ಒಬ್ಬ ಕ್ಲಾಸ್‌ ಪ್ಲೇಯರ್‌. ಹಾಗೇ ಒಳ್ಳೇ ನಾಯಕ. ಇಂಡಿಯನ್‌ ಜರ್ಸಿ ಮೈಮೇಲಿದ್ರೇ ಆಗ ವಿರಾಟ್‌ ರೂಪವಾಗಿ ಆರ್ಭಟಿಸುತ್ತಾರೆ. ಆಗ ಅದು ಕೊಹ್ಲಿಗೆ ಡಿಫರೆಂಟ್‌ ಬಾಲ್ ಗೇಮಾಗಿರುತ್ತೆ. ದಿಲ್ಲಿವಾಲಾ ಟೀಂ ಇಂಡಿಯಾ ಪರ ಆಡಿದ ಪಂದ್ಯಗಳಲ್ಲಿ ಈವರೆಗೂ ಸ್ಥಿರತೆ ಕಾಪಾಡಿಕೊಂಡ ಆಟಗಾರ. ವಿಶ್ವಕಪ್‌ನಲ್ಲಿ ಜೂನ್‌ 5ರಂದು ಸೌಥ್ ಆಫ್ರಿಕಾ ವಿರುದ್ಧ ಆಡುವ ಮೊದಲ ಪಂದ್ಯದಲ್ಲಿ ಕ್ಯಾಪ್ಟನ್‌ ಕೊಹ್ಲಿ ಮಿಂಚು ಹರಿಸಲಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ಲೀಡ್‌ ಮಾಡಿದ ರೀತಿ ಮಾಡದೇ, ಯಾವುದೇ ತಪ್ಪುಗಳಿಲ್ಲದೇ ಕೊಹ್ಲಿ ಟೀಂ ಇಂಡಿಯಾ ಮುನ್ನಡೆಸಲಿದ್ದಾರೆ. ಯಾಕಂದ್ರೇ, ವರ್ಲ್ಡ್‌ಗೂ ಐಪಿಎಲ್‌ ಸ್ಥಿತಿ, ಪ್ಲೇಯರ್ಸ್ ಹಾಗೂ ವಾತಾವರಣ ಕಂಪ್ಲೀಟಾಗಿ ಚೇಂಜಾಗಿರುತ್ತೆ.

ಗೆಲ್ಲೋಕೆ ಬೇಕು ಕೊಹ್ಲಿ ರೀತಿಯ ಹಠ

ವರ್ಲ್ಡ್‌ಕಪ್‌ ಗೆಲ್ಲೋದು ಕೊಹ್ಲಿ ಮುಂದಿರುವ ಗುರಿ :

ದೇಶಕ್ಕಾಗಿ ಎಷ್ಟು ಸಾಧ್ಯವೋ ಅಷ್ಟು ಒಳ್ಳೇ ಎಫರ್ಟ್‌ ಹಾಕಿ, ವರ್ಲ್ಡ್‌ಕಪ್‌ ಎತ್ತಿ ಹಿಡಿಯಬೇಕು ಅನ್ನೋದಷ್ಟೇ ಈಗ ವಿರಾಟ್‌ ಮುಂದಿರುವ ಗುರಿ. ಐಪಿಎಲ್‌ನಲ್ಲಿ ಕ್ಲಿಕ್‌ ಆಗದ ಮಾತ್ರಕ್ಕೆ ಕೊಹ್ಲಿಯನ್ನ ಕುಗ್ಗಿಸುವ ಜಾಯಮಾನದ ಆಟಗಾರ ಅಲ್ವೇ ಅಲ್ಲ. ಆರ್‌ಸಿಬಿ ಫ್ಯಾನ್ಸ್‌ ಮತ್ತು ವಿರಾಟ್‌ ಕೊಹ್ಲಿ ಫ್ಯಾನ್ಸ್‌ ವಿರಾಟ್‌ ಶ್ರೇಷ್ಠ ಪ್ರದರ್ಶನ ನೀಡಲೆಂದು ಬಯಸುತ್ತಾರೆ. ಬರೀ ಒಂದು ಟೂರ್ನಿ ಫೇಲಾದ ಕೂಡಲೇ ಅದೇ ರೀತಿ ವರ್ಲ್ಡ್‌ಕಪ್‌ನಲ್ಲೂ ಫೇಲಾಗ್ತಾರೆ ಅಂತಾ ಊಹಿಸೋದು ತಪ್ಪು. ವರ್ಲ್ಡ್‌ಕಪ್‌ನಲ್ಲಿ ಯಾವ ರೀತಿ ತನ್ನ ತಂಡವನ್ನ ದೇಶಕ್ಕಾಗಿ ಮುನ್ನಡೆಸುತ್ತಾರೆ ಅನ್ನೋದಷ್ಟೇ ಈಗ ಮುಖ್ಯ ಆಗ್ಬೇಕು. ಕ್ರಿಕೆಟ್‌ನಲ್ಲಿ ಇನ್ನೂ ದೂರಕ್ರಮಿಸಬೇಕಿರುವ ಕೊಹ್ಲಿ, ತನ್ನ ಸುತ್ತ ಏನು ನಡೀತಿದೆ ಅನ್ನೋದು ಚೆನ್ನಾಗಿಯೇ ಗೊತ್ತಿದೆ.

ಒಂದು ವೇಳೆ ತನ್ನ ಅತ್ಯದ್ಭುತ ಪ್ರದರ್ಶನದಿಂದಾಗಿ ಕೊಹ್ಲಿ ವರ್ಲ್ಡ್‌ಕಪ್‌ನ ದೇಶಕ್ಕಾಗಿ ಗೆದ್ದುಕೊಟ್ರೇ, ಈಗ ಯಾರೆಲ್ಲ ಟೀಕಿಸುತ್ತಿದ್ದಾರೋ ಅವರೇ ಆತನನ್ನ ಹೊತ್ತು ಮೆರೆಸುತ್ತಾರೆ, ಕ್ಯಾಪ್ಟನ್‌ ಕೊಹ್ಲಿಯನ್ನ ಹಾಡಿಹೊಗಳುತ್ತಾರೆ ಅನ್ನೋದು ಕೂಡ ಅಷ್ಟೇ ನಿಜ.

ABOUT THE AUTHOR

...view details