ಡರ್ಬಿಶೈರ್:ಮೊಹಮ್ಮದ್ ಅಮೀರ್ ಕೇವಲ 27 ವಯಸ್ಸಿಗೆ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದಾಗ ನನಗೆ ತುಂಬಾ ನೋವುಂಟು ಮಾಡಿತ್ತು ಎಂದು ಪಾಕಿಸ್ತಾನ ತಂಡದ ಬೌಲಿಂಗ್ ಕೋಚ್ ವಕಾರ್ ಯೂನಿಸ್ ತಿಳಿಸಿದ್ದಾರೆ.
ಮೊದಲಿಗೆ ಅಮೀರ್ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಟಿ-20 ಸರಣಿಗೆ ತಾವೂ ಲಭ್ಯರಿರುವುದಿಲ್ಲ ಎಂದು ತಿಳಿಸಿದ್ದರು. ಆದರೆ, ಎರಡನೇ ಮಗುವಿಗೆ ತಂದೆಯಾಗುತ್ತಿದ್ದಂತೆ ತಮ್ಮ ನಿರ್ಧಾರ ಬದಲಿಸಿಕೊಂಡಿರುವ ಅವರು ತಾವೂ ಪ್ರವಾಸಕ್ಕೆ ಸಿದ್ದ ಎಂದು ತಿಳಿಸಿ ಕೋವಿಡ್ 19 ಟೆಸ್ಟ್ಗೂ ಒಳಗಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಗಾಗಿ ಪಾಕಿಸ್ತಾನದ ಮುಖ್ಯ ಆಯ್ಕೆಗಾರ ಹಾಗೂ ಮುಖ್ಯ ಕೋಚ್ ಆಗಿರುವ ಮಿಸ್ಬಾ ಉಲ್ ಹಕ್ ಅಮೀರ್ ಅವರನ್ನು ಸಂಪರ್ಕಿಸಿದ್ದರು. ತಕ್ಷಣ ಸಿದ್ದವಾಗಿರುವುದಾಗಿ ಹೇಳಿದ್ದ ಅವರು ಎರಡು ಬಾರಿ ಕೋವಿಡ್ 19 ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಫಲಿತಾಂಶ ಬಂದ ತಕ್ಷಣ ಇಂಗ್ಲೆಂಡ್ಗೆ ಪಯಣ ಬೆಳೆಸಿದ್ದಾರೆ.