ಅಹ್ಮದಾಬಾದ್:ಭಾರತ ತಂಡದ ಅನುಭವಿ ವೇಗಿ ಇಶಾಂತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ 14 ವರ್ಷಗಳಲ್ಲಿ 194 ಪಂದ್ಯಗಳನ್ನಾಡಿದ ನಂತರ ಮೊದಲ ಸಿಕ್ಸರ್ ಸಿಡಿಸಿದ್ದಾರೆ.
ಇಶಾಂತ್ ಶರ್ಮಾ 100 ಟೆಸ್ಟ್, 80 ಏಕದಿನ ಪಂದ್ಯ ಮತ್ತು 14 ಟಿ-20 ಪಂದ್ಯಗಳನ್ನಾಡಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 3ನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಜಾಕ್ ಲೀಚ್ ಅವರ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸಿದರು, ಇದು ಅವರ ಮೊದಲ ಅಂತಾರಾಷ್ಟ್ರೀಯ ಸಿಕ್ಸರ್ ಆಗಿದೆ.
ಒಟ್ಟಾರೆ, 194 ಪಂದ್ಯಗಳಲ್ಲಿ 2,677 ಎಸೆತಗಳನ್ನೆದುರಿಸಿದ ನಂತರ ಇಶಾಂತ್ ಶರ್ಮಾ ಸಿಕ್ಸರ್ ಸಿಡಿಸಿದ್ದಾರೆ. ವಿಶೇಷವೆಂದರೆ ಸ್ಫೋಟಕ ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮಾ, ರಿಷಭ್ ಪಂತ್, ಬೆನ್ ಸ್ಟೋಕ್ಸ್, ಬೈರ್ಸ್ಟೋವ್ ಅಂತಹವರೆ ಈ ಪಂದ್ಯದಲ್ಲಿ ಸಿಕ್ಸರ್ ಸಿಡಿಸುವಲ್ಲಿ ವಿಫಲರಾಗಿದ್ದರು. ಇಶಾಂತ್ ಶರ್ಮಾ ಸಿಡಿಸಿದ ಸಿಕ್ಸರ್ ಇಡೀ ಪಂದ್ಯದ ಏಕೈಕ ಸಿಕ್ಸರ್ ಅಗಿತ್ತು.
100ನೇ ಟೆಸ್ಟ್ ಪಂದ್ಯವನ್ನಾಡಿ ಭಾರತದ 2ನೇ ವೇಗದ ಬೌಲರ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಇಶಾಂತ್ ಶರ್ಮಾ, ಪಂದ್ಯದ ಮೊದಲ ವಿಕೆಟ್ ಪಡೆದಿದ್ದರು. ಇದೀಗ ಪಂದ್ಯ ಮೊದಲ ಸಿಕ್ಸರ್ ಕೂಡ ಅವರ ಬ್ಯಾಟ್ನಿಂದ ಸಿಡಿದಿದ್ದು ವಿಶೇಷವಾಗಿತ್ತು.
ಇದನ್ನು ಓದಿ:ರೂಟ್, ಜ್ಯಾಕ್ ಲೀಚ್ ಮಾರಕ ಬೌಲಿಂಗ್ ದಾಳಿ: 149ಕ್ಕೆ ಆಲೌಟ್ ಆದ ಭಾರತ