ಚೆನ್ನೈ: ಭಾರತದ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ಸೋಮವಾರ ಟೆಸ್ಟ್ ಕ್ರಿಕೆಟ್ನಲ್ಲಿ 300ನೇ ವಿಕೆಟ್ ಪಡೆಯುವ ಮೂಲಕ ದೇಶದ ಪರ ಈ ಸಾಧನೆ ಮಾಡಿದ 3ನೇ ವೇಗಿ ಹಾಗೂ ಒಟ್ಟಾರೆ 6ನೇ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾದರು.
ಇಂಗ್ಲೆಂಡ್ ತಂಡದ ಡಾನ್ ಲಾರೆನ್ಸ್ ವಿಕೆಟ್ ಪಡೆಯುವ ಮೂಲಕ ಇಶಾಂತ್, ಕಪಿಲ್ ದೇವ್ (434) ಮತ್ತು ಜಹೀರ್ ಖಾನ್ (311) ಅವರ ಸಾಲಿಗೆ ಸೇರಿದರು. ಇಶಾಂತ್ ತಮ್ಮ 98ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. 2007ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಇಶಾಂತ್ 11 ಬಾರಿ 5 ವಿಕೆಟ್ ಮತ್ತು 10 ಬಾರಿ 4 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಒಟ್ಟಾರೆ ಪಂದ್ಯದಲ್ಲಿ ಒಮ್ಮೆ 10 ವಿಕೆಟ್ ಪಡೆದಿದ್ದಾರೆ.