ಕರ್ನಾಟಕ

karnataka

ETV Bharat / sports

ಪದಾರ್ಪಣೆ ಪಂದ್ಯದಲ್ಲಿ ಭಾರತದ ಪರ 2ನೇ ಗರಿಷ್ಠ ರನ್ ಗಳಿಸಿದ ಇಶಾನ್ ಕಿಶನ್​

2011ರಲ್ಲಿ ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ್ದ ಅಜಿಂಕ್ಯ ರಹಾನೆ 61 ರನ್​ಗಳಿಸಿರುವುದು ಭಾರತೀಯ ಬ್ಯಾಟ್ಸ್​ಮನ್​ ಪದಾರ್ಪಣೆ ಪಂದ್ಯದ ಗರಿಷ್ಠ ಸ್ಕೋರರ್ ಆಗಿದೆ. ಇವರಿಬ್ಬರನ್ನು ಹೊರೆತುಪಡಿಸಿದರೆ, ರಾಬಿನ್ ಉತ್ತಪ್ಪ 2007ರಲ್ಲಿ ಪಾಕ್ ವಿರುದ್ಧ, ರೋಹಿತ್ ಶರ್ಮಾ 2007ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ.

ಇಶಾನ್ ಕಿಶನ್
ಇಶಾನ್ ಕಿಶನ್

By

Published : Mar 14, 2021, 10:55 PM IST

ಅಹ್ಮದಾಬಾದ್​: ಇಂಗ್ಲೆಂಡ್ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಅಬ್ಬರದ ಅರ್ಧಶತಕ ಸಿಡಿಸಿದ ಇಶಾನ್ ಕಿಶನ್​, ಪದಾರ್ಪಣೆ ಮಾಡಿದ ಪಂದ್ಯದಲ್ಲಿ ಭಾರತದ ಪರ ಗರಿಷ್ಠ ರನ್​ ಸಿಡಿಸಿದ 2ನೇ ಬ್ಯಾಟ್ಸ್​ಮನ್​ ಎಂಬ ದಾಖಲೆಗೆ ಪಾತ್ರರಾದರು.

ಬೌಂಡರಿ ,ಸಿಕ್ಸರ್​ಗಳ ಸುರಿಮಳೆ ಸುರಿಸಿದ ಕಿಶನ್ ಕೇವಲ 32 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ 56 ರನ್​ ಚಚ್ಚಿದರು. ಈ ಮೂಲಕ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ರಹಾನೆ ನಂತರ ಗರಿಷ್ಠ ರನ್​ಗಳಿಸಿದ ಬ್ಯಾಟ್ಸ್​ಮನ್ ಎನಿಸಿಕೊಂಡರು. ಅಲ್ಲದೆ ಪದಾರ್ಪಣೆ ಪಂದ್ಯದಲ್ಲಿ ಬೌಂಡರಿ ಸಿಕ್ಸರ್​ಗಳ ಮೂಲಕ ಹೆಚ್ಚು ರನ್​ಗಳಿಸಿದ ದಾಖಲೆಗೂ ಇಶಾನ್ ಕಿಶನ್ ಪಾತ್ರರಾದರು. ಒಟ್ಟು 56 ರನ್​ಗಳಲ್ಲಿ 44 ರನ್​ ಬೌಂಡರಿ ಮತ್ತು ಸಿಕ್ಸರ್​ಗಳಲ್ಲೇ ಬಂದಿವೆ.

2011ರಲ್ಲಿ ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ್ದ ಅಜಿಂಕ್ಯ ರಹಾನೆ 61 ರನ್​ಗಳಿಸಿರುವುದು ಭಾರತೀಯ ಬ್ಯಾಟ್ಸ್​ಮನ್​ ಪದಾರ್ಪಣೆ ಪಂದ್ಯದ ಗರಿಷ್ಠ ಸ್ಕೋರರ್ ಆಗಿದೆ. ಇವರಿಬ್ಬರನ್ನು ಹೊರೆತುಪಡಿಸಿದರೆ, ರಾಬಿನ್ ಉತ್ತಪ್ಪ 2007ರಲ್ಲಿ ಪಾಕ್ ವಿರುದ್ಧ, ರೋಹಿತ್ ಶರ್ಮಾ 2007ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ.

ಒಟ್ಟಾರೆ ಟಿ20ಯಲ್ಲಿ ಮೊದಲ ಪಂದ್ಯದಲ್ಲಿ ಹೆಚ್ಚು ರನ್​ಗಳಿಸಿದ ದಾಖಲೆ ಆಸ್ಟ್ರೇಲಿಯಾದ ನಾಯಕ ರಿಕಿಪಾಂಟಿಂಗ್ ಅವರ ಹೆಸರಿನಲ್ಲಿದೆ. ಅವರು 2005ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಅಜೇಯ 98 ರನ್​ಗಳಿಸಿದ್ದರು. 2009ರಲ್ಲಿ ಡೆಬ್ಯೂಟ್ ಮಾಡಿದ್ದ ಡೇವಿಡ್ ವಾರ್ನರ್​ 89 ರನ್​ಗಳಿಸಿ 2ನೇ ಸ್ಥಾನದಲ್ಲಿದ್ದಾರೆ.

ABOUT THE AUTHOR

...view details