ಜೈಪುರ: ನ್ಯೂಜಿಲ್ಯಾಂಡ್ ತಂಡದ ಸ್ಪಿನ್ ಬೌಲರ್ ಇಶ್ ಸೋಧಿಯನ್ನು ರಾಜಸ್ಥಾನ ರಾಯಲ್ಸ್ ಸ್ಪಿನ್ ಬೌಲಿಂಗ್ ಸಲಹೆಗಾರ ಹಾಗೂ ತಂಡದ ಕಾರ್ಯ ನಿರ್ವಾಹಕನ ಜವಾಬ್ದಾರಿಯನ್ನು ನೀಡುವ ಮೂಲಕ ಮತ್ತೆ ತಂಡಕ್ಕೆ ಸೇರಿಸಿಕೊಂಡಿದೆ.
ಕಿವೀಸ್ ಲೆಗ್ ಸ್ಪಿನ್ನರ್ ಸ್ಪಿನ್, ಬೌಲಿಂಗ್ ಕೋಚ್ ಸಾಯಿರಾಜ್ ಬಹಟುಲೆ ಮತ್ತು ಮುಖ್ಯ ಕಾರ್ಯಾಚರಣೆ ಅಧಿಕಾರಿ ಜಾಕ್ ಲುಶ್ ಮೆಕ್ರಮ್ ಅವರೊಂದಿಗೆ ಎರಡೆರಡು ಕಾರ್ಯ ನಿರ್ವಹಿಸಲಿದ್ದಾರೆ.
27 ವರ್ಷದ ಸೋಧಿ ಕಿವೀಸ್ ಪರ 40 ಟಿ-20 ಪಂದ್ಯಗಳನ್ನಾಡಿದ್ದಾರೆ. 2018 ಹಾಗೂ 2019ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿ 9 ವಿಕೆಟ್ ಪಡೆದಿದ್ದರು.
"ಈ ಎರಡು ಹೊಸ ಸವಾಲುಗಳನ್ನು ರಾಜಸ್ಥಾನ ರಾಯಲ್ಸ್ ಪರ ಸ್ವೀಕರಿಸುತ್ತಿರುವುದು ನನಗೆ ಖುಷಿ ತಂದಿದೆ. ಈಗಾಗಲೇ ಎರಡು ಆವೃತ್ತಿಗಳಲ್ಲಿ ರಾಯಲ್ಸ್ ಪರ ಆಡಿರುವುದರಿಂದ ಫ್ರಾಂಚೈಸಿಯಲ್ಲಿರುವ ಎಲ್ಲಾ ಜನರ ಬಗ್ಗೆ ತಿಳಿದುಕೊಂಡಿದ್ದೇನೆ. ಅವರೆಲ್ಲರಿಂದ ನನಗೆ ಸದಾ ಬೆಂಬಲ ಇದ್ದೇ ಇರುತ್ತದೆ. ಆದ್ದರಿಂದ ಎರಡು ಕೆಲಸ ನಿರ್ವಹಿಸಲು ರಾಯಲ್ಸ್ ಆಫರ್ ನೀಡಿದಾಗ ಯೋಚನೆ ಮಾಡದೆ ಒಪ್ಪಿಕೊಂಡೆ. ನನಗೆ ಈ ಫ್ರಾಂಚೈಸಿ ಎಂದರೆ ತುಂಬಾ ಇಷ್ಟ. ಈ ಬಾರಿ ಟ್ರೋಫಿ ಗೆಲ್ಲಲು ಅವರಿಗೆ ನಾನು ಸಹಾಯ ಮಾಡುತ್ತೇನೆ ಎಂದು ಸೋಧಿ ಹೇಳಿದ್ದಾರೆ.
ರಾಜಸ್ಥಾನ ತಂಡದಲ್ಲಿ ಕನ್ನಡಿಗರಾದ ಶ್ರೇಯಸ್ ಗೋಪಾಲ್, ಅನಿವೃದ್ಧ ಜೋಶಿ, ಯಶಸ್ವಿ ಜೈಸ್ವಾಲ್, ಮಯಾಂಕ್ ಮಾರ್ಕಂಡೆ ಹಾಗೂ ಮಹಿಪಾಲ್ ಲಾಮ್ರೊರ್ರಂತಹ ಯುವ ಸ್ಪಿನ್ ಬೌಲರ್ಗಳಿಗೆ ಸೋಧಿ ನೆರವು ಸಿಗಲಿದೆ.