ಹೈದರಾಬಾದ್:ಏಕದಿನ, ಟಿ-20, ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾದ ಹಲವು ಆಟಗಾರರಿಗೆ ಗಾಯದ ಸಮಸ್ಯೆ ಕಾಡುತ್ತಿದ್ದು, ಬಿಡುವಿಲ್ಲದೆ ಟೂರ್ನಿಗಳನ್ನ ಆಯೋಜನೆ ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಸದ್ಯ ಟೀಂ ಇಂಡಿಯ ಇತರರಿಗೆ ಹೋಲಿಕೆ ಮಾಡಿದರೆ ಯಶಸ್ವಿ ತಂಡ ಎನಿಸಿಕೊಂಡಿದೆ. ಕಳೆದ 10 ವರ್ಷಗಳಲ್ಲಿ ಭಾರತ ತಂಡ ಗೆದ್ದಿರುವ ಪಂದ್ಯಗಳ ಸಂಖ್ಯೆಯೇ ಇದಕ್ಕೆ ಸ್ಪಷ್ಟ ಉದಾಹರಣೆ. ಕಳೆದ 10 ವರ್ಷಗಳಲ್ಲಿ ಐಸಿಸಿ ಆಯೋಜನೆ ಮಾಡಿದ್ದ ಎಲ್ಲಾ ಟೂರ್ನಮೆಂಟ್ಗಳಲ್ಲೂ ಭಾರತ ತಂಡ ಸೆಮಿಫೈನಲ್ ಮತ್ತು ಫೈನಲ್ ಪ್ರವೇಶಿಸಿದೆ. ಇತರೆಲ್ಲಾ ತಂಡಗಳಿಗಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದೇ ಇದಕ್ಕೆ ಕಾರಣನಾ? ಎಂಬ ಪ್ರಶ್ನೆ ಎದುರಾಗಿದೆ.
ಹೆಚ್ಚು ಹೆಚ್ಚು ಪಂದ್ಯಗಳನ್ನು ಆಯೋಜನೆ ಮಾಡುವುದು ತಪ್ಪಲ್ಲ. ಆದರೆ, ತಮ್ಮ ಪ್ರಮುಖ ಆಟಗಾರರ ಆರೋಗ್ಯದ ಬಗ್ಗೆ ಬಿಸಿಸಿಐ ಯಾವ ರೀತಿ ಕಾಳಜಿ ವಹಿಸಿದೆ ಎಂಬ ಪ್ರಶ್ನೆ ಎದುರಾಗಿದೆ. ಈಗಾಗಲ್ ಟೀಂ ಇಂಡಿಯಾದ ಪ್ರಮುಖ 6 ಆಟಗಾರರು ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ.
ವಿಶ್ವಕಪ್ ನಂತರ ಭಾರತ ತಂಡ ಆಡಿದ ಸರಣಿಗಳ ವೇಳಾಪಟ್ಟಿ ಶಿಖರ್ ಧವನ್ ಗಾಯಗೊಂಡು ನ್ಯೂಜಿಲ್ಯಾಂಡ್ ಸರಣಿಯಿಂದ ಹೊರಬಿದ್ದಿದ್ದಾರೆ. ರೋಹಿತ್ ಕೂಡ ಗಾಯಕ್ಕೆ ತುತ್ತಾಗಿದ್ದಾರೆ. ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ದೀಪಕ್ ಚಹಾರ್ ಕೂಡಾ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜಸ್ಪ್ರಿತ್ ಬುಮ್ರಾ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ.
ಬಿಡುವಿಲ್ಲದ ಟೂರ್ನಿಗಳ ಆಯೋಜನೆ ಬಗ್ಗೆ ಮಾತನಾಡಿದ್ದ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ವೇಳಾಪಟ್ಟಿಯನ್ನು ಪ್ರಶ್ನಿಸಿದ್ದರು. ಕನ್ನಡಿಗ ಕೆ.ಎಲ್.ರಾಹುಲ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಪಂದ್ಯಗಳಿಗೆ ಫಿಟ್ ಆಗಿರಬೇಕಾಗಿರುವುದು ಆಟಗಾರರಿಗೆ ಕಷ್ಟವಾಗಿದೆ ಎಂದಿದ್ದರು.