ಚೆನ್ನೈ: ಐಪಿಎಲ್ನಲ್ಲೇ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾರ ಮಗಳು ಸಮೈರಾ, ಧೋನಿ ನೇತೃತ್ವದ ಸಿಎಸ್ಕೆ ತಂಡದ ಬ್ರಾಂಡ್ ಅಂಬಾಸಿಡರ್ ಎಂಬರ್ಥದಲ್ಲಿ ಸಿಎಸ್ಕೆ ತನ್ನ ಇನ್ಸ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡು ಅಚ್ಚರಿ ಮೂಡಿಸಿದೆ.
2013 ರಿಂದ ಮುಂಬೈ ನಾಯಕನಾದ ರೋಹಿತ್ ಶರ್ಮಾ 6 ಟೂರ್ನಿಗಳಲ್ಲಿ 4 ಬಾರಿ ತಮ್ಮ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಹೀಗಿರುವಾಗ 3 ಬಾರಿ ಚಾಂಪಿಯನ್ ಆಗಿರುವ ಸಿಎಸ್ಕೆ ತಂಡ ರೋಹಿತ್ ಮಗಳು ನಮ್ಮ ತಂಡವನ್ನು ಬೆಂಬಲಿಸಿದ್ದಾಳೆ ಎಂದು ತನ್ನ ಇನ್ಸ್ಸ್ಟಾಗ್ರಾಮ್ನಲ್ಲಿ ಸಿಎಸ್ಕೆ ಹೇಳಿಕೊಂಡಿದೆ.
ಆದರೆ, ಇದು ಸತ್ಯಾಂಶವಲ್ಲ ಕೇವಲ ತಮಾಶೆಗಾಗಿ ಸಿಎಸ್ಕೆ ಮಾಡಿರುವ ಒಂದು ಪೋಸ್ಟ್ . ಹೌದು, ದೀಪಾವಳಿ ಹಬ್ಬದಂದು ರೋಹಿತ್ ತಮ್ಮ ಪತ್ನಿ ರಿತಿಕಾ ಹಾಗೂ ಮಗಳ ಜೊತೆ ಫೋಟೋವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದರು. ಆ ಫೋಟೋದಲ್ಲಿ ಸಮೈರಾ ಹಳದಿ ಬಣ್ಣದ ಡ್ರೆಸ್ ತೊಟ್ಟಿರುವುದಕ್ಕೆ ಹರ್ಷಾಲಿ ಎಂಬ ಧೋನಿ ಅಭಿಮಾನಿಯೊಬ್ಬರು ನನಗೆ ಸಮೈರಾ ಸಿಎಸ್ಕೆ ಅಭಿಮಾನಿ ಎಂಬಂತೆ ಕಾಣುತ್ತಿದ್ದಾಳೆ ಎಂದು ಬರೆದು ಸಿಎಸ್ಕೆಗೆ ಟ್ಯಾಗ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಸ್ಕೆ ತಂಡ "ಹಿಟ್ಮ್ಯಾನ್ ಮಗಳು ನಮಗೋಸ್ಕರ ಚೆಂಡನ್ನು ಗ್ರೌಂಡ್ನಿಂದ ಆಚೆ ಅಟ್ಟಿದ್ದಾಳೆ" ಎಂದು ಬರೆದುಕೊಂಡು ಸಮೈರಾಳ ಎರಡು ಫೋಟೋಗಳನ್ನು ಶೇರ್ ಮಾಡಿದೆ.
ಶೇರ್ ಮಾಡಿರುವ ಎರಡು ಫೋಟೋಗಳಲ್ಲಿ ಒಂದರಲ್ಲಿ ಸಮೈರಾ ತನ್ನ ಎರಡು ಬೆರಳುಗಳನ್ನು ಬಾಯಿಲ್ಲಿಟ್ಟು ಸಿಳ್ಳೆ ಹೊಡೆಯುವ ಭಂಗಿಯಲ್ಲಿದ್ದರೆ, ಮತ್ತೊಂದು ಫೋಟೋದಲ್ಲಿ ಹಳದಿ ಬಣ್ಣದ ಧಿರಿಸು ಧರಿಸಿದ್ದಾಳೆ. ಸಿಎಸ್ಕೆ ತಮ್ಮ ತಮ್ಮ ಮಾರ್ಕೆಟಿಂಗ್ ಸಿಂಬಲ್ಗಳಾಗಿ ಬಳಸುವ ಹ್ಯಾಶ್ಟ್ಯಾಗ್ಗಳಾದ ವಿಷಲ್ ಪೋಡು(#whistlePodu) ಹಾಗೂ ಯೆಲ್ಲೊ (#yello) ಈ ಎರಡನ್ನು ಸಮೈರಾ ಫೋಟೊಗಳನ್ನು ಪ್ರತಿಬಿಂಬಿಸುತ್ತಿರುವುದರಿಂದ ಸಿಎಸ್ಕೆ ಈ ರೀತಿ ಹೇಳಿಕೊಂಡಿದೆ.