ಇಸ್ಲಾಮಾಬಾದ್:ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ತೆರವುಗೊಳಿಸಿದ ವಿಚಾರಕ್ಕೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಗರಂ ಆಗಿದ್ದಾರೆ.
'ಕಾಶ್ಮೀರ ವಿಚಾರದಲ್ಲಿ ಅಮೆರಿಕ ಮಧ್ಯಸ್ಥಿಕೆ ಅಗತ್ಯ': ಭಾರತದ ನಡೆ ಖಂಡಿಸಿ ಅಫ್ರಿದಿ ಟ್ವೀಟ್
ಕಾಶ್ಮೀರಿ ನಿವಾಸಿಗಳಿಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಮೋದಿ ಸರ್ಕಾರ ಸೋಮವಾರ ಹಿಂಪಡೆದಿದ್ದು, ಈ ವಿಚಾರಕ್ಕೆ ಖ್ಯಾತ ಕ್ರಿಕೆಟಿಗ ಶಾಹಿದ್ ಅಫ್ರಿದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿರುವ ಖ್ಯಾತ ಆಲ್ರೌಂಡರ್, ವಿಶ್ವಸಂಸ್ಥೆಯ ಅಸ್ತಿತ್ವವನ್ನು ಪ್ರಶ್ನಿಸಿದ್ದಾರೆ. ವಿಶ್ವಸಂಸ್ಥೆ ನೀಡಿರುವ ಗೊತ್ತುವಳಿಯ ಅನ್ವಯದಂತೆ ಕಾಶ್ಮೀರಿ ನಿವಾಸಿಗಳಿಗೆ ಅವರ ಹಕ್ಕು ನೀಡಬೇಕು. ಕಾಶ್ಮೀರದಲ್ಲಿ ಮಾನವೀಯತೆ ವಿರುದ್ಧ ನಡೆದ ಅಪರಾಧವನ್ನು ಎಲ್ಲರೂ ಗಮನಿಸಬೇಕು. ಹಾಗಾಗಿ ವಿಶ್ವಸಂಸ್ಥೆ ನಿದ್ರಿಸುತ್ತಿದೆಯೇ ಎಂದಿರುವ ಅಫ್ರಿದಿ, ಅಮೆರಿಕ ಅಧ್ಯಕ್ಷರು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಲಂಡನ್ನಲ್ಲಿ ಸೋಮವಾರ ಬೆಳಗ್ಗೆ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದ ಅವರು, ಪಾಕಿಸ್ತಾನಕ್ಕೆ ಕಾಶ್ಮೀರ ಬೇಕಾಗಿಲ್ಲ, ಆದರೆ ಭಾರತವೂ ಅದರ ಮೇಲೆ ಹಕ್ಕು ಚಲಾಯಿಸಬಾರದು. ಕಾಶ್ಮೀರ ಸರ್ವ ಸ್ವತಂತ್ರವಾಗಿರಲಿ. ಹೀಗಾದಲ್ಲಿ ಮಾನವೀಯತೆ ನೆಲೆಸುತ್ತದೆ ಎಂದಿದ್ದರು.