ಕೊಲಂಬೊ: ಟೀಂ ಇಂಡಿಯಾ ಮಾಜಿ ವೇಗಿ ಇರ್ಫಾನ್ ಪಠಾಣ್ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸಲಿದ್ದು, ಕ್ಯಾಂಡಿ ಟಸ್ಕರ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಕ್ರಿಸ್ ಗೇಲ್, ಕುಸಲ್ ಪೆರೆರಾ, ಕುಸಲ್ ಮೆಂಡಿಸ್ ಮತ್ತು ನುವಾನ್ ಪ್ರದೀಪ್,ಇಂಗ್ಲೆಂಡ್ ಬಲಗೈ ವೇಗದ ಬೌಲರ್ ಲಿಯಾಮ್ ಪ್ಲಂಕೆಟ್ ಕ್ಯಾಂಡಿ ಟಸ್ಕರ್ಸ್ ತಂಡದ ಭಾಗವಾಗಿದ್ದಾರೆ.
ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಕಣಕ್ಕಿಳಿಯಲಿದ್ದಾರೆ ಇರ್ಫಾನ್ ಪಠಾಣ್!! - ಲಂಕಾ ಪ್ರೀಮಿಯರ್ ಲೀಗ್
ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರ ಸಹೋದರ ಸೋಹೈಲ್ ಖಾನ್ ಮಾಲೀಕತ್ವದ ಲಂಕಾ ಪ್ರೀಮಿಯರ್ ಲೀಗ್ನ ಕ್ಯಾಂಡಿ ಟಸ್ಕರ್ಸ್ ತಂಡದ ಪರ ಟೀಂ ಇಂಡಿಯಾ ಮಾಜಿ ಆಲ್ರೌಡರ್ ಇರ್ಫಾನ್ ಪಠಾಣ್ ಕಣಕ್ಕಿಳಿಯಲಿದ್ದಾರೆ..

ಎಲ್ಪಿಎಲ್ನಲ್ಲಿ ಕ್ಯಾಂಡಿ ಫ್ರ್ಯಾಂಚೈಸಿಯ ಭಾಗವಾಗಲು ನಾನು ತುಂಬಾ ಉತ್ಸುಕನಾಗಿದ್ದೇನೆ, ತಂಡದಲ್ಲಿ ಅತ್ಯಾಕರ್ಷಕ ಆಟಗಾರರಿದ್ದು, ಅವರ ಜೊತೆಗಿನ ಅನುಭವಕ್ಕಾಗಿ ಎದುರು ನೋಡುತ್ತಿದ್ದೇನೆ" ಎಂದು ಇರ್ಫಾನ್ ಎಲ್ಪಿಎಲ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಠಾಣ್ ಅವರನ್ನುಸ್ವಾಗತಿಸಿದ ಕ್ಯಾಂಡಿ ಫ್ರಾಂಚೈಸಿ ಮಾಲೀಕ ಮತ್ತು ಬಾಲಿವುಡ್ ನಟ ಸೊಹೈಲ್ ಖಾನ್, "ಇರ್ಫಾನ್ ಸೇರ್ಪಡೆ ತಂಡದ ಪವರ್ ಅನ್ನು ಹೆಚ್ಚಿಸುವುದಲ್ಲದೆ ಅವರ ಅನುಭವವು ತಂಡಕ್ಕೆ ದೊಡ್ಡ ಆಸ್ತಿಯಾಗಲಿದೆ" ಎಂದು ಹೇಳಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್ ಅನ್ನು ನವೆಂಬರ್ 21ರಿಂದ ಡಿಸೆಂಬರ್ 13ರವರೆಗೆ ಎರಡು ಸ್ಥಳಗಳಲ್ಲಿ ಆಡಲು ನಿರ್ಧರಿಸಲಾಗಿದೆ.