ಹೈದರಾಬಾದ್: ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಎಲ್ಲ ಮಾದರಿ ಕ್ರಿಕೆಟ್ನಿಂದ ನಿವೃತ್ತಿ ಘೋಷಣೆ ಮಾಡಿದ್ದು, ತಮ್ಮ 17 ವರ್ಷದ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಈ ವೇಳೆ ತಮ್ಮಲ್ಲಿರುವ ಬೇಸರದ ಬಗ್ಗೆಯೂ ಪಠಣ್ ಹೇಳಿಕೊಂಡಿದ್ದಾರೆ.
ಬಹುತೇಕ ಮಂದಿ 27 ಅಥವಾ 28ಕ್ಕೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿ 35 ವರ್ಷ ಆಗುವವರೆಗೂ ಕ್ರಿಕೆಟ್ ಆಡುತ್ತಾರೆ. ಆದರೆ ನಾನು 27 ವರ್ಷದವನಿದ್ದಾಗಲೆ 301 ವಿಕೆಟ್ ಪಡೆದುಕೊಂಡಿದ್ದೆ ಎಂದಿದ್ದಾರೆ.
2012ರ ನಂತ ಇರ್ಫಾನ್ ಪಠಾಣ್ ಮತ್ತೆ ತಂಡಕ್ಕೆ ಕಂಬ್ಯಾಕ್ ಮಾಡಲು ಸಾಧ್ಯವಾಗಿಲ್ಲ. 7 ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದಿದ್ದ ಪಠಾಣ್ ನನಗೆ 2016ರಲ್ಲೇ ಮತ್ತೆ ತಂಡ ಸೇರಿಕೊಳ್ಳುವುದು ಅಸಾಧ್ಯ ಎಂದು ಗೊತ್ತಾಯಿತು ಎಂದಿದ್ದಾರೆ.
'ನಾನು 2016ರ ಸೈಯದ್ ಮುಷ್ತಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಕೆಮಾಡಿದ್ದೆ. ಆ ಸಮಯದಲ್ಲಿ ನಾನು ಬೆಸ್ಟ್ ಆಲ್ರೌಂಡರ್ ಆಗಿದ್ದೆ, ಈ ಬಗ್ಗೆ ಆಯ್ಕೆ ಸಮಿತಿ ಗಮನ ಸೆಳೆದಿದ್ದೆ. ಆದರೆ ಅವರು ನನ್ನ ಬೌಲಿಂಗ್ ಬಗ್ಗೆ ತೃಪ್ತಿ ಹೊಂದಿರಲಿಲ್ಲ. ಅಂದೇ ನನಗೆ ಮತ್ತೆ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡುವುದು ಅಸಾಧ್ಯದ ಮಾತು ಎಂದು ತಿಳಿಯಿತು' ಎಂದಿದ್ದಾರೆ.
ನಾನು ಇನ್ನೂ ಹೆಚ್ಚಿನ ಪಂದ್ಯಗಳನ್ನ ಆಡಿದ್ದರೆ 500 ರಿಂದ 600 ವಿಕೆಟ್ ಪಡೆದು. ಹೆಚ್ಚು ರನ್ ಗಳಿಸುತಿದ್ದೆ. ಆದ್ರೆ ಅದು ಸಾಧ್ಯವಾಗಲಿಲ್ಲ ಎಂದು ಪಠಾಣ್ ಬೇಸರ ವ್ಯಕ್ತಪಡಿಸಿದ್ದಾರೆ. ಇರ್ಫಾನ್ ಪಠಾಣ್ 29 ಟೆಸ್ಟ್ ಪಂದ್ಯಗಳಿಂದ 100 ವಿಕೆಟ್, 1 ಶತಕ ಹಾಗೂ 6 ಅರ್ಧಶತಕ ಸೇರಿ 1105 ರನ್, 120 ಏಕದಿನ ಪಂದ್ಯಗಳಿಂದ 173 ವಿಕೆಟ್, 5 ಅರ್ಧಶತಕ ಸೇರಿ 1544 ರನ್ ಹಾಗೂ 24 ಟಿ-20 ಪಂದ್ಯಗಳಿಂದ 28 ವಿಕೆಟ್ ಸೇರಿ 172ರನ್ಗಳಿಕೆ ಮಾಡಿದ್ದಾರೆ.